

ಬೆಂಗಳೂರು: ಇತ್ತೀಚೆಗಷ್ಟೆ ಅಂತರಾಷ್ಟ್ರೀಯ ವೈದ್ಯ ದಿನಾಚರಣೆ ನಡೆದಿದ್ದು, ವೈದ್ಯರ ಸೇವೆಯನ್ನು ದೀರ್ಘ ಕಾಲದ ನಂತರವೂ ನೆನೆಪಿಸಿಕೊಳ್ಳುವ ಉದ್ದೇಶದಿಂದ ಮಾಯಾ ಫಿಲ್ಮ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಆವರಣದಲ್ಲಿ ಆಯೋಜಿಸಿರುವ ‘ವಿಂಟೇಜ್ ಸಲ್ಯೂಟ್’ ಫೋಟೋ ಪ್ರದರ್ಶನ ಜನರ ಮೆಚ್ಚುಗೆಗೆ ಕಾರಣವಾಗಿದೆ.
ಬಸವನಗುಡಿಯು ಬೆಂಗಳೂರಿನ ಸಾಂಸ್ಕೃತಿಕ ಮತ್ತು ಪಾರಂಪರಿಕ ಮಹತ್ವವನ್ನು ಹೊಂದಿರುವ ಏರಿಯಾ. ಈ ಭಾಗದಲ್ಲಿ ಶತಮಾನದ ಹಿಂದಿನಿಂದ ವೈದ್ಯರಾಗಿ ಸೇವೆ ಮಾಡಿದ ಲೆಜೆಂಡರೀಸ್ ಕ್ಯಾರೆಕ್ಟರ್‌ಗಳನ್ನು ಜನರಿಗೆ ಪರಿಚಯಿಸಬೇಕೆಂಬ ವಿಭಿನ್ನ ಉದ್ದೇಶದೊಂದಿಗೆ ಮಾಯಾ ಫಿಲ್ಮ್ ಮುಖ್ಯಸ್ಥೆ ಮಾಯಾ ಅವರು ವಿಭಿನ್ನ ಪರಿಕಲ್ಪನೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜು.1ರಂದು ಅಂತರಾಷ್ಟ್ರೀಯ ವೈದ್ಯ ದಿನಾಚರಣೆ ಅಂಗವಾಗಿ ನಡೆದ ವೈದ್ಯ ದಿಗ್ಗಜರೊಂದಿಗೆ ಸಂವಾದ ಕಾರ್ಯಕ್ರಮವು ಜನರನ್ನು ಭಾವನಾತ್ಮಕಗೊಳಿಸಿತು. ಜು.2 ರಿಂದ ವಿಂಟೇಜ್ ಸಲ್ಯೂಟ್ ಹೆಸರಿನಲ್ಲಿ ಬಸವನಗುಡಿ ಸುತ್ತಮುತ್ತ ವೈದ್ಯರಾಗಿ ಸೇವೆ ಸಲ್ಲಿಸಿ ಮರೆಯಾಗಿರುವ ಸುಮಾರು 34 ವೈದ್ಯಶಿರೋಮಣಿಗಳ ಫೋಟೋ ಪ್ರದರ್ಶನ ಆಯೋಜಿಸಲಾಗಿತ್ತು. ಕಳೆದ ಎರಡು ತಿಂಗಳಿನಿಂದ ಸಂಗ್ರಹಿಸಲಾಗಿದ್ದ ಶತಮಾನಗಳ ಹಿಂದಿನ ೆಟೋಗಳನ್ನು ಪರಿಕಲ್ಪನೆಗೆ ಅನುಗುಣವಾಗಿ ಕ್ರಾಪ್ ಮಾಡಿ, ರೀವರ್ಕ್ ಮೂಲಕ ಪ್ರದರ್ಶನಕ್ಕೆ ಇಡಲಾಗಿತ್ತು. ಫೋಟೋಗಳ ಜೊತೆಗೆ ಅವರ ಸಂಕ್ಷಿಪ್ತ ಮಾಹಿತಿಯನ್ನು ಇಡಲಾಗಿದೆ. ಪ್ರದರ್ಶನವನ್ನು ಜು.7ರವರೆಗೆ ನಿಗದಿಗೊಳಿಸಲಾಗಿತ್ತು. ಆದರೆ ಸಾರ್ವಜನಿಕರ ಒತ್ತಾಯದ ಮೇರೆಗೆ ಜು.14 ರವರೆಗೆ ಮುಂದುವರೆಸಲು ಆಯೋಜಕರು ನಿರ್ಧರಿಸಿದ್ದಾರೆ.
-ಜಿ.ಎಸ್.ರಾಮಪ್ರಸಾದ್, ನಿವೃತ್ತ ಬ್ಯಾಂಕ್ ನೌಕರ.
- ಮಾಯಾ ಚಂದ್ರ, ಮಾಯಾ ಫಿಲ್ಮ್ ಸಂಸ್ಥಾಪಕಿ