ಜೆಡಿಎಸ್ ಯುವ ಘಟಕಕ್ಕೆ ವಿನೋದ್ ನೇಮಕ

RemasterDirector_1a5c03258
ಜೆಡಿಎಸ್ ಯುವ ಘಟಕದ ತಾಲೂಕು ಕಾರ್ಯಧ್ಯಕ್ಷರನ್ನಾಗಿ ನೇಮಕಗೊಂಡಿರುವ ಪಿ.ಎನ್.ವಿನೋದ್ ಅವರಿಗೆ ಮಾಜಿ ಶಾಸಕ ಕೆ.ಮಹದೇವ್ ನೇಮಕಾತಿ ಆದೇಶ ಪತ್ರ ವಿತರಿಸಿದರು. ಪ್ರಕಾಶ್ ಸಿಂಗ್, ಮಂಜುನಾಥ್ ಸಿಂಗ್, ಕೆ.ಮಹೇಶ್, ಪಿ.ಸಿ.ಕೃಷ್ಣ, ಆಶಾ, ಭಾರತಿ, ಮುಖಂಡರಾದ ಉಮೇಶ್, ಪೆಪ್ಸಿ ಕುಮಾರ್, ಸುಬ್ರಹ್ಮಣ್ಯ, ಜವರಪ್ಪ ಇತರರು ಇದ್ದರು.
Published on

ಪಿರಿಯಾಪಟ್ಟಣ: ತಾಲೂಕು ಜೆಡಿಎಸ್ ಯುವ ಘಟಕದ ಕಾರ್ಯಧ್ಯಕ್ಷರಾಗಿ ಪಿ.ಎನ್.ವಿನೋದ್ ನೇಮಕಗೊಂಡಿದ್ದಾರೆ.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ನಡೆದ ಪಕ್ಷದ ಸಭೆಯಲ್ಲಿ ಮಾಜಿ ಶಾಸಕ ಕೆ.ಮಹದೇವ್ ಅವರು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೀಡಿರುವ ನೇಮಕಾತಿ ಆದೇಶ ಪತ್ರವನ್ನು ಪಿ.ಎನ್.ವಿನೋದ್ ಹಸ್ತಾಂತರಿಸಿದರು.

ಕೆ.ಮಹದೇವ್ ಮಾತನಾಡಿ, ನೂತನ ಕಾರ್ಯಾಧ್ಯಕ್ಷರು ತಾಲೂಕಿನಾದ್ಯಂತ ಸಂಘಟನೆಯಲ್ಲಿ ತೊಡಗಿಸಿಕೊಂಡು ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕಿದೆ. ತಾಲೂಕಿನಲ್ಲಿ ಜೆಡಿಎಸ್‌ಗೆ ಯುವಕರಿಂದ ಉತ್ತಮ ಸ್ಪಂದನೆಯಿದ್ದು, ಗ್ರಾಮೀಣ ಪ್ರದೇಶದಲ್ಲಿ ಕ್ರಿಯಾಶೀಲರಾಗಿರುವ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿ ನೀಡುವಂತೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಪ್ರಕಾಶ್ ಸಿಂಗ್, ಮಾಜಿ ಅಧ್ಯಕ್ಷರಾದ ಮಂಜುನಾಥ್ ಸಿಂಗ್, ಕೆ.ಮಹೇಶ್, ಸದಸ್ಯರಾದ ಪಿ.ಸಿ.ಕೃಷ್ಣ, ಆಶಾ, ಭಾರತಿ, ಮುಖಂಡರಾದ ಉಮೇಶ್, ಪೆಪ್ಸಿ ಕುಮಾರ್, ಸುಬ್ರಹ್ಮಣ್ಯ, ಜವರಪ್ಪ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net