ಜಯನಗರದಲ್ಲಿ ವಿನಾಯಕೋತ್ಸವಕ್ಕೆ ಅದ್ದೂರಿ ತೆರೆ

vinay-1
Published on

ಬೆಂಗಳೂರು: ಶ್ರೀ ವಿನಾಯಕ ಮಿತ್ರ ಮಂಡಳಿ, ವಿಜಯವಾಣಿ ಸಹಯೋಗದಲ್ಲಿ ಜಯನಗರ 8ನೇ ಹಂತದಲ್ಲಿ ಆಯೋಜಿಸಲಾಗಿರುವ "ವಿನಾಯಕೋತ್ಸವ'ಕ್ಕೆ ಮಂಗಳವಾರ ಅದ್ದೂರಿಯಾಗಿ ತೆರೆ ಬಿದ್ದಿದೆ.

ಮೂರು ದಿನ ಕಾಲ ವಿವಿಧ ಧಾರ್ಮಿಕ, ಸಾಂಸತಿಕ ಕಾರ್ಯಕ್ರಮಗಳು ವಿಜೃಭಣೆಯಿಂದ ನಡೆದವು. ಮೊದಲ ದಿನ ಗೌರೀಶ್ವರ ಕಲಾಕ್ಷೇತ್ರ ನಾಟ್ಯ ಶಾಲೆ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ, ಮೈಸೂರು ರಾಮಚಂದ್ರ ಆಚಾರ್​ ಅವರಿಂದ ದಾಸರ ಪದಗಳು ಕಾರ್ಯಕ್ರಮ ಜರುಗಿದವು. 2ನೇ ದಿನ ಸುನೀತ, ಶ್ರೀಹರ್ಷ, ಶ್ರೀನಿಧಿ ಶಾಸ್ತ್ರಿ, ಸುರಾ ದಾಸ್​ ತಂಡದಿಂದ ನಡೆದ ಸಂಗೀತ ಕಾರ್ಯಕ್ರಮ ನೋಡುಗರ ಮನಸೊರೆಗೊಂಡಿತು. ವಿಘ್ನೇಶ್ವರನು ಎಲ್ಲ ಇಷ್ಟಾರ್ಥ ಈಡೇರಿಸಿ ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲಸಲು ಶಕ್ತಿ ನೀಡುವಂತೆ, ಅಡತೆಗಳನ್ನು ನಿವಾರಿಸುವಂತೆ ಪುರೋಹಿತರಿಂದ ಗಣಪತಿ ಹೋಮ ನಡೆಸಲಾಯಿತು.ಪುರೋಹಿತರಿಂದ ನಡೆದ ಗಣಪತಿ ಹೋಮದ ಆಧ್ಯಾತ್ಮಿಕ ಅಗ್ನಿ ಕ್ರಿಯೆಯಲ್ಲಿ ಸಾವಿರಾರು ಭಕ್ತಾಧಿಗಳು ಭಕ್ತಿಯಲ್ಲಿ ಮಿಂದೆದ್ದರು.

"ಡ್ರಮ್​ ಮತ್ತು ತಾಳವಾದ್ಯ' ಪ್ರೇಕ್ಷಕರಿಗೆ ಭರಪೂರ ಮನರಂಜನೆ ಒದಗಿಸಿತು. 108 ಬಗೆ ಬಗೆಯ ಖಾದ್ಯಗಳನ್ನು ನೈವೇದ್ಯ ಮಾಡಲಾಯಿತು. ಕೊನೆಯ ದಿನದಂದು ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಸಾಂಸತಿಕ ಕಲಾ ತಂಡದೊಂದಿಗೆ ವಿಜೃಂಭಣೆ ಮೆರವಣಿಗೆ ಮೂಲಕ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಮೆರವಣಿಗೆಯಲ್ಲಿ ಕೀಲು ಕುದುರೆ, ತಮಟೆ, ಡೊಳ್ಳು ವಾದ್ಯ, ವೀರಗಾಸೆ, ಪೂಜಾ ಕುಣಿತ, ಹಲವಾರು ಬಗೆಯ ವಾದ್ಯಗಳು ಸಾಥ್​ ನೀಡಿದವು. ಮೂರು ದಿನಗಳಿಂದ ಜಯನಗರ ಸೇರಿ ಸುತ್ತಮುತ್ತ ಬಡಾವಣೆಗಳಿಂದ ಸಾವಿರಾರು ಭಕ್ತಾಧಿಗಳು ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾದರು.

ಶಾಸಕ ಸಿ.ಕೆ.ರಾಮಮೂರ್ತಿ, ಮಾಜಿ ಕಾಪೋರ್ರೇಟರ್​, ಸ್ಥಳಿಯ ರಾಜಕೀಯ ಮುಖಂಡರು "ವಿನಾಯಕೋತ್ಸವ'ಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಹಲವು ಸಹಯೋಗದಲ್ಲಿ ಎಂ.ವಿ.ಕುಮಾರ್​ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net