ಸೋಮವಾರಪೇಟೆಯಲ್ಲಿ ವಿನಾಯಕ ಚತುರ್ಥಿ ಸಂಭ್ರಮ

ಸೋಮವಾರಪೇಟೆಯಲ್ಲಿ ವಿನಾಯಕ ಚತುರ್ಥಿ ಸಂಭ್ರಮ
Published on

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಶನಿವಾರ ವಿನಾಯಕ ಚತುರ್ಥಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಸಾರ್ವಜನಿಕ ಗೌರಿ-ಗಣೇಶ ಸೇವಾಸಮಿತಿ, ಸೋಮೇಶ್ವರ ದೇವಾಲಯ, ದೇವಾಂಗ ಸಂಘ, ಕುರುಹಿನ ಶೆಟ್ಟಿ ಸಮಾಜ, ಬಸವೇಶ್ವರ ದೇವಾಲಯ, ಕಿಬ್ಬೆಟ್ಟ ಅಯ್ಯಪ್ಪ ಕಾಲನಿ, ದೊಡ್ಡಮಳ್ತೆ ಸೇರಿದಂತೆ 80 ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಆಲೆಕಟ್ಟೆ ರಸ್ತೆ, ಕಕ್ಕೆಹೊಳೆ, ರೇಂಜರ್ಸ್‌ ಬ್ಲಾಕ್, ಮಹದೇಶ್ವರ ಬ್ಲಾಕ್, ಗಾಂಧಿ ನಗರ, ಕಾಗಡಿಕಟ್ಟೆ, ಚೌಡ್ಲು, ಬೀಟಿಕಟ್ಟೆ ಸೇರಿದಂತೆ ಹಲವೆಡೆ ಸ್ಥಳೀಯರು ವಿನಾಯನಕನ ಇಟ್ಟು ಪೂಜಿಸಿದರು.

ಗಣಪತಿ ಸೇವಾ ಸಮಿತಿ ಅಧ್ಯಕ್ಷ ದರ್ಶನ್ ಜೋಯಪ್ಪ, ಗೌರವಾಧ್ಯಕ್ಷ ಉಮೇಶ್, ಉಪಾಧ್ಯಕ್ಷ ಸಾಗರ್, ಕಾರ್ಯದರ್ಶಿ ರಘು, ಖಜಾಂಚಿ ಚೇತನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net