ವಿಜಯ ವಿನಾಯಕ ದೇವಾಲಯದ ಪ್ರತಿಷ್ಠಾಪನೆ ವಾರ್ಷಿಕೋತ್ಸವ

vinayaka
Published on

ಮಡಿಕೇರಿ

ಮಡಿಕೇರಿಯ ಕಾನ್ವೆಂಟ್ ಜಂಕ್ಷನ್‌ನಲ್ಲಿರುವ ಶ್ರೀ ವಿಜಯವಿನಾಯಕ ದೇವಾಲಯ ಪ್ರತಿಷ್ಠಾಪನೆಯ 27 ನೇ ವಾರ್ಷಿಕೋತ್ಸವ ಶುಕ್ರವಾರ ವಿಜೃಂಭಣೆಯಿAದ ನಡೆಯಿತು. ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.

ಭಕ್ತರ ಸಂಭ್ರಮದ ಮಧ್ಯೆ ವಿಜಯ ವಿನಾಯಕನಿಗೆ ವಿಶೇಷ ಪೂಜೆಗಳು ನೆರವೇರಿದವು. ದೇವಾಲಯದ ಪ್ರಧಾನ ಅರ್ಚಕ ಕೃಷ್ಣ ಉಪಾಧ್ಯಾಯ ಪೂಜಾ ವಿದಿ ವಿಧಾನ ನೆರವೇರಿಸಿದರು.

ಶಾಸಕ ಡಾ. ಮಂತರ್ ಗೌಡ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಗರಸಭಾಧ್ಯಕ್ಷೆ ಕಲಾವತಿ, ಎಡಿಸಿ ಐಶ್ವರ್ಯ, ಎಎಸ್‌ಪಿ ಬಾರಿಕೆ ಪಿ. ದಿನೇಶ್ ಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ನಗರಸಭೆಯ ಸದಸ್ಯರು, ಮೂಡಾ ಅಧ್ಯಕ್ಷ ರಾಜೇಶ್ ಎಲ್ಲಪ್ಪ ಸೇರಿದಂತೆ ಗಣ್ಯರು ಶ್ರೀ ವಿಜಯ ವಿನಾಯಕನಿಗ ಪೂಜೆ ಸಲ್ಲಿಸಿದರು. ವಿದ್ಯಾರ್ಥಿಗಳೂ ಸೇರಿದಂತೆ ಭಕ್ತರಿಗೆ ಮಧ್ಯಾಹ್ನ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಬಿ. ಪೂಣಚ್ಚ ಮತ್ತು ನಿರ್ದೇಶಕರು ಈ ಸಂದರ್ಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net