

ಮಡಿಕೇರಿ: ಕತ್ತಲೆಕಾಡು, ಜೇನುಕೊಲ್ಲಿ ಗ್ರಾಮದ ಶ್ರೀ ವಿನಾಯಕ ಸೇವಾ ಟ್ರಸ್ಟ್‌ಟಿ ಲೋಗೋವನ್ನು ಟ್ರಸ್ಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ತಂಡದ ಮುಖ್ಯಸ್ಥ ಕುಮಾರ್ ಲಾಂಛನ ಬಿಡುಗಡೆ ಮಾಡಿದರು.
ಟ್ರಸ್ಟ್ ಪ್ರಮುಖರು ಅಧ್ಯಕ್ಷ ಹೊನ್ನಪ್ಪ ಆಚಾರ್ಯ ಮಾತನಾಡಿ, ೧೮ನೇ ವರ್ಷದ ಗೌರಿ ಗಣೇಶೋತ್ಸವವನ್ನು ಮೂರು ದಿನ ಕಾಲ ಆಚರಿಸಲಾಗುತ್ತದೆ. ಸೆ.೭ರಂದು ಭಾರತ್ ಮತಾ ಪೂಜೆ, ಧ್ವಜಾರೋಹಣದೊಂದಿಗೆ ಗಣೇಶ ಪ್ರತಿಷ್ಠಾಪನೆ, ೮ರಂದು ಬೆಳಗ್ಗೆ ೧೦ ಗಂಟೆಗೆ ಸತ್ಯನಾರಾಯಣ ಪೂಜೆ, ೯ಕ್ಕೆ ಮಧ್ಯಾಹ್ನ ಮಹಾಪೂಜೆ ಬಳಿಕ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಚಂದ್ರಶೇಖರ ರೈ, ಕಾರ್ಯದರ್ಶಿ ಬ್ರಿಜೇಶ್ ಖಜಾಂಚಿ ನವೀನ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಅಶೋಕ, ಸಹ ಖಜಾಂಚಿ ಜಯಪ್ರಕಾಶ್, ಮಹಿಳಾ ಘಟಕದ ಪುಷ್ಪಾವತಿ, ಸುಶೀಲ, ವಿದ್ಯಾರ್ಥಿ ಘಟಕದ ಸದಸ್ಯರು, ಸಾರ್ವಜನಿಕರು ಇದ್ದರು.