

ಧಾರವಾಡ: ದಿನಕ್ಕೆ 10 ನಿಮಿಷ ಕಾಲ ಕುಟುಂಬದವರು, ವಕೀಲರ ಭೇಟಿಗೆ ನ್ಯಾಯಾಲಯ ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನ 3.30ಕ್ಕೆ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ, ಪುತ್ರಿಯರಾದ ವೈಶಾಲಿ, ದೀಪಾಲಿ ಹಾಗೂ ಪುತ್ರ ಹೇಮಂತ ಮತ್ತು ವಕೀಲ ಬಾಹುಬಲಿ ಅವರು ಭೇಟಿಗೆ ಆಗಮಿಸಿದ್ದರು. ಮಕ್ಕಳು ಆಧಾರ್ ಕಾರ್ಡ್ ತೆಗೆದುಕೊಂಡು ಬಂದಿದ್ದರು.
ಪ್ರತಿ ವರ್ಷ ಸಂಭ್ರಮದಿಂದ ಜನ್ಮದಿನ ಆಚರಿಸುತ್ತಿದ್ದ ವಿನಯ ಅವರನ್ನು ಆ ಸ್ಥಿತಿಯಲ್ಲಿ ಕಂಡು ಪತ್ನಿ, ಮಕ್ಕಳು ಭಾವುಕರಾದರು. ಪತ್ನಿ, ಮಕ್ಕಳು ‘ಹ್ಯಾಪಿ ಬರ್ತ್ ಡೇ ಟು ಅವರ್ ಹೀರೋ’ ಎಂದು ಬರೆದಿದ್ದ ಕೇಕ್ ತಂದಿದ್ದರು. ಕೇಕ್ ಕತ್ತರಿಸಲು ನಿರಾಕರಿಸಿದ ವಿನಯ ಕೂಡ ಭಾವುಕರಾಗಿದ್ದರು. ಬೇಸರದಲ್ಲೇ ಮಾತನಾಡಿಸಿದರು. ಕುಟುಂಬದವರು ಕೇಕ್ ಮತ್ತು ಹೊಸ ಬಟ್ಟೆಯನ್ನು ವಾಪಸ್ ಮೆನೆಗೆ ತೆಗೆದುಕೊಂಡು ಹೋದರು.