ಕುಲಕರ್ಣಿ ಶಾಲೆಯ ದಶಮಾನೋತ್ಸವ

IMG_20231227_124114_393.jpg
Published on

ಹುಬ್ಬಳ್ಳಿ: ಇಲ್ಲಿಯ ಭವಾನಿನಗರದ ಭಾವದೀಪ ಶಿಕ್ಷಣ ಸಂಸ್ಥೆಯ ವಿಮಲಾ ಕುಲಕರ್ಣಿ ಮೆಮೋರಿಯಲ್ ಶಾಲೆಯ ದಶಮಾನೋತ್ಸವ ಸಂಭ್ರಮದಿಂದ ನಡೆಯಿತು.

ಎರಡು ದಿನಗಳ ಸಾಂಸತಿಕ ಕಾರ್ಯಕ್ರಮವನ್ನು ಅತಿಥಿಗಳಾಗಿದ್ದ ವಿವೇಕಾನಂದ ಡಿ. ಅವರು ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಎಸ್.ಎನ್. ವೆಂಕಟೇಶಾಚಾರ್ಯ, ಶ್ರೀ ಡಾ. ಸುಭುದೇಂದ್ರತಿರ್ಥ ಸ್ವಾಮಿಗಳ ಅನುಗ್ರಹದಿಂದ ಭಾವದೀಪ ಶಿಕ್ಷಣ ಸಂಸ್ಥೆಯು ದೊಡ್ಡ ಮಟ್ಟದಲ್ಲಿ ಬೆಳೆದಿದೆ. 10 ವರ್ಷ ಪೂರೈಸಿದೆ ಎಂದರು.

10ನೇ ತರಗತಿಯಲ್ಲಿ ಉತ್ತಮ ಸಾಧನೆಗೈದವರಿಗೆ ಹಾಗೂ ಆದರ್ಶ ವಿದ್ಯಾಥಿರ್ ಅಭಿಷೇಕ ಪುಟ್ಟಣ್ಣವರ ಮತ್ತು ವಿದ್ಯಾಥಿರ್ನಿ ಸಹನಾ ಫಕೀರಗೌಡರ ಅವರಿಗೆ ಬಹುಮಾನ ನೀಡಲಾಯಿತು. ವಿದ್ಯಾಥಿರ್ಗಳು ಹರಹರ ಮಹಾದೇವ ನೃತ್ಯರೂಪಕವನ್ನು ಅದ್ಭುತವಾಗಿ ಪ್ರಸ್ತುತಪಡಿಸಿದರು.

ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀಕನಕವೀಡು, ಸೇತುಮಾಧವರಾವ್, ಖಜಾಂಚಿ ರಘೋತ್ತಮರಾವ್, ಸದಸ್ಯರಾದ ಶ್ರೀರಂಗ ಹನುಮಸಾಗರ, ಎ.ಸಿ. ಗೋಪಾಲ, ಕಿರಣ ಅಡವಿ, ಮುಖ್ಯಾಧ್ಯಾಪಕಿ ಅನಿತಾ ಬಾಗಲಕೋಟ, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಾಚಾರ್ಯ ಶ್ರೀದೇವಿ ಮಳಗಿ ವಾರ್ಷಿಕ ವರದಿ ವಾಚನ ಮಾಡಿದರು. ಅದಿತಿ ಬಳಗಾನೂರ ಸ್ವಾಗತಿಸಿದರು. ಪೃಥ್ವೀಶ ಸದ್ಲಿ ಮತ್ತು ಅನನ್ಯಾ ಜೋಶಿ ನಿರೂಪಿಸಿದರು. ಜಿನಮ್ ರಾಂಕಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net