

ಹುಬ್ಬಳ್ಳಿ: ಬೆಂಗಳೂರಿನ ಸುಹಾಸ್ತಿ ಯುವ ಜೈನ ಮಿಲನ್ ಸಂಘಟನೆಯು ಸಿಂಗಾಪುರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತರ್ ರಾಷ್ಟ್ರೀಯ ಜೈನ ಮಿಲನ್ ಸದಸ್ಯರ ಸಮಾವೇಶ "ಜಿನ ಸಮ್ಮಿಲನ'ದಲ್ಲಿ ನಗರದ ಸಮಾಜ ಸೇವಾಕರ್ತ ವಿಮಲ್ ತಾಳಿಕೋಟಿ ಅವರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ತಾಳಿಕೋಟಿ ಅವರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿನ ಸೇವೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.
ವರೂರು ನವಗ್ರಹತೀರ್ಥದ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕರು, ಆರತಿಪುರ ಜೈನ ಮಠದ ಸ್ವಸ್ತಿಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕರು, ಅಖಿಲ ಭಾರತ ಜೈನ ಮಿಲನ್ ಕಾರ್ಯಾಧ್ಯಕ್ಷ ಡಿ. ಸುರೇಂದ್ರಕುಮಾರ, ಅನಿತಾ ಸುರೇಂದ್ರಕುಮಾರ್, ಸುಹಾಸ್ತಿ ಜೈನ ಮಿಲನ್ನ ಚಿತ್ತಜಿನೇಂದ್ರ ವಜ್ರಕುಮಾರ್, ಜಿನೇಂದ್ರ ಕಣಗಾವಿ, ಯುವರಾಜ್ ಜೈನ್, ಮಾಳ ಹರ್ಷೇಂದ್ರ, ಅಜಿತ್ ಮುರಗುಂಡೆ, ಶ್ವೇತಾ, ನೀರಜಾ, ಅನುಪಮಾ ರೋಕಡೆ, ಜ್ಯೋತಿ ದೊಡ್ಡಮನಿ ಇತರರು ಉಪಸ್ಥಿತರಿದ್ದರು.
ಕರ್ನಾಟಕದಿಂದ 250ಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗಿಯಾಗಿದ್ದರು. ಸಿಂಗಪುರದ ಜೈನ್ ಸಮಾಜ ಉತ್ತಮ ಸಹಕಾರ ನೀಡಿತು ಎಂದು ಶಾಂತಿನಾಥ ಹೋತಪೇಟಿ ತಿಳಿಸಿದ್ದಾರೆ.