ಸುಸ್ಥಿರ ಅಭಿವೃದ್ಧಿ ಕಾಣದ ಹಳ್ಳಿಗಳು

19 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತ ದೇಶದಲ್ಲಿ ಹಳ್ಳಿಗರಿಗೆ ಸಿಗಬೇಕಾದ ಆದ್ಯತೆ ಇನ್ನೂ ಸಿಕ್ಕಿಲ್ಲ. ಇಂದಿರಾಗಾAಽಯಿAದ ಈವರೆಗೆ ಇನ್ನೂ ಗ್ರಾಮೀಣಾಭಿವೃದ್ಧಿ ಮಾತು ಪ್ರಸ್ತುತವಾಗಿದೆಯೇ ಹೊರತು, ಗ್ರಾಮಗಳು ಮÁತ್ರ ಸುಸ್ಥಿರ ಅಭಿವೃದ್ಧಿ ಕಂಡಿಲ್ಲ ಎಂದು ಚಿಂತಕ ನಾಗೇಶ ಹೆಗಡೆ ಹೇಳಿದರು.
ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಬೆಂಗಳೂರಿನ ಬಹುರೂಪಿ' ಹಾಗೂ ಸೂರಶೆಟ್ಟಿಕೊಪ್ಪದಸರ್ವೋದಯ ಮಹಾಸಂಘ' ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಮÁಜ ವಿಜ್ಞಾನಿ ಡಾ. ಪ್ರಕಾಶ ಭಟ್ ಅವರ `ಹಳ್ಳಿಗಳನ್ನು ಕಟ್ಟುವ ಕಷ್ಟಸುಖ' ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಭಾರತ ದೇಶ ಹಳ್ಳಿಗಳ ನಾಡು ಅಂತಾರೆ. ಆದರೆ, ಸಮÁಜ ಮÁತ್ರ ನಗರದ ಜನತೆಗೆ ಹೆಚ್ಚಿನ ಮÁನ್ಯತೆ ನೀಡುತ್ತಿದೆ. ಪ್ರತಿ ವಿಷಯದಲ್ಲಿ ಹಳ್ಳಿಗರು ಕೊನೇ ಸಾಲಿನಲ್ಲಿ ಶ್ರಮಿಕರಾಗಿಯೇ ಬದುಕಬೇಕು. ಈ ಹಿನ್ನೆಲೆಯಲ್ಲಿ ಡಾ. ಪ್ರಕಾಶ ಭಟ್ ಹಳ್ಳಿಗರ ಕಷ್ಟ ಅರಿತು ಅವುಗಳಿಗೆ ಪರಿಹಾರ ಒದಗಿಸಿದ್ದಾರೆ. ಜತೆಗೆ ಹಳ್ಳಿಗಳನ್ನು ಕಟ್ಟುವ ಕಷ್ಟಗಳನ್ನು ಪುಸ್ತಕ ರೂಪದಲ್ಲಿ ತಂದಿದ್ದು, ಈ ಪುಸ್ತಕ ಜಗತ್ತಿನ ವಿವಿಧ ಭಾಷೆಗಳಲ್ಲೂ ಬರಲಿ ಹಾರೈಸಿದರು.
ಡಾ. ಪ್ರಕಾಶ ಭಟ್ ಮÁತನಾಡಿ, ದೇಶ ವಿದೇಶ ಸುತ್ತಾಡಿ ಶಿಕ್ಷಣ ಪಡೆದೆ. ಪಶು ವೈದ್ಯ ಸಹ ಆದೆ. ದನಗಳ ಬಗ್ಗೆ ಚಿಂತನೆ, ಮÁತನಾಡುವ ಬದಲು ಜನಗಳ ಬಗ್ಗೆ ಚಿಂತನೆ ಮÁಡಬೇಕೆಂದು ಹಳ್ಳಿಗಳ ಕಡೆಗೆ ಹೋದೆ. ಅವರ ಕಷ್ಟಗಳನ್ನು ಅರಿತು ಪರಿಹಾರ ಒದಗಿಸಿದೆ. ಅವರ ಕಷ್ಟಗಳನ್ನು ಆಮಂತ್ರಿಸಿದೆ. ಹಳ್ಳಿಗರಿಗೆ ನಾವು ತುಸು ಪ್ರೀತಿ ನೀಡಿದರೆ ಅದರ ನೂರರಷ್ಟು ಪ್ರೀತಿಯನ್ನು ಮರಳಿ ನಮಗೆ ಕೊಡುತ್ತಾರೆ ಎಂಬುದಕ್ಕೆ ನಾನೇ ಉದಾಹರಣೆ. ಅವರಿಗೆ ಹಣಕ್ಕಿಂತ ಜೀವನ ಮುಖ್ಯ ಎಂಬುದನ್ನು ಅರಿತಿದ್ದೇನೆ ಎಂದರು.
ಸೂರಶೆಟ್ಟಿಕೊಪ್ಪದ ರೈತ ಮಹಿಳೆಯರು ಸಿದ್ಧಪಡಿಸಿದ ಜೋಳದ ರೊಟ್ಟಿಗಳನ್ನು ಸಮÁರಂಭದಲ್ಲಿ ಬಿಡುಗಡೆ ಮÁಡಿದ್ದು ವಿಶೇಷವಾಗಿತ್ತು. ನಂತರ ನಡೆದ ಸಂವಾದದಲ್ಲಿ ಕೇಂದ್ರೀಯ ಬುಡಕಟ್ಟು ವಿವಿ ಕುಲಪತಿ ಡಾ.ತೇಜಸ್ವಿ ಕಟ್ಟಿಮನಿ, ಕೃಷ್ಣಮೂರ್ತಿ ಬಿಳಿಗೆರೆ, ಬಹುರೂಪಿ ಪ್ರಕಾಶನದ ಜಿ.ಎನ್. ಮೋಹನ ಮÁತನಾಡಿದರು.
ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ಡಿ.ಆರ್. ಪಾಟೀಲ, ಡಾ.ಮÁಲತಿ ಪm್ಟಣಶೆಟ್ಟಿ, ಸಿ.ಯು. ಬೆಳ್ಳಕ್ಕಿ, ಸೂರಶೆಟ್ಟಿ ಸೇರಿ ವಿವಿಧ ಹಳ್ಳಿಗಳ ಜನರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net