ಗ್ರಾಪಂಗಳಲ್ಲಿ ಮಹಿಳೆಯರೇ ಅಧಿಪತ್ಯ

ಹೆಚ್ಚಿನ ಮಹಿಳೆಯರು ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗೆಆಯ್ಕೆಯಾಗಿರುವುದು ಖುಷಿಯ
Grama panchayatigalalli Mahileyarade Adhipatya
Published on


ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಎರಡನೇ ಅವಧಿಗೆ ಗ್ರಾಮ ಪಂಚಾಯಿಗಳಲ್ಲಿ ನಡೆದ ಚುನಾವಣೆಯಲ್ಲಿ ಪುರುಷರಿಗಿಂತಲೂ ಮಹಿಳೆಯರೇ ಹೆಚ್ಚಿಗೆ ಅಧಿಪತ್ಯವನ್ನು ಹೊಂದಿದ್ದಾರೆ.
ಚುನಾವಣಾ ನಡೆದ 152 ಗ್ರಾಪಂಗಳ ಪೈಕಿ 107 ಗ್ರಾಪಂಗಳಲ್ಲಿ ಅಧ್ಯಕ್ಷ ಸ್ಥಾನವನ್ನು ಮತ್ತು 45 ಗ್ರಾಪಂಗಳಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಮಹಿಳೆಯರು ಅಲಂಕರಿಸಿದ್ದಾರೆ. ಹಾಗೆಯೇ ಪುರುಷರು 45 ಗ್ರಾಪಂ ಅಧ್ಯಕ್ಷ ಸ್ಥಾನ ಮತ್ತು 107 ಗ್ರಾಪಂಗಳಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಪಡೆದಿದ್ದಾರೆ.
ಗ್ರಾಪಂಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ ಪ್ರಕ್ರಿಯೆ ಮುಗಿದು, ಚುನಾವಣೆ ೂಷಣೆಯಾಗುತ್ತಿದ್ದಂತೆ ಆಯಾ ವ್ಯಾಪ್ತಿಯಲ್ಲಿ ಪ್ರಬಲ ಆಕಾಂಗಳು ತೀವ್ರ ಪೈಪೋಟಿ ಎದುರಿಸಿ, ಜಾತಿ, ರಾಜಕೀಯ ಪ್ರಾಬಲ್ಯ, ಶಾಸಕರು ಮತ್ತು ಮಾಜಿ ಶಾಸಕರ ಬೆಂಬಲ, ಆರ್ಥಿಕ ಪ್ರಭಾವದಲ್ಲಿ ಗೆಲುವು ಕಂಡಿದ್ದಾರೆ.

ಪ್ರಾಬಲ್ಯಕ್ಕಾಗಿ ಕಸರತ್ತು:
ಮೊದಲಿನಿಂದಲೂ ಗ್ರಾಪಂ, ಜಿಪಂ ಮತ್ತು ತಾಪಂ ವ್ಯಾಪ್ತಿಯಲ್ಲಿ ಸುಧಾಕರ್​ ಬಣವು ಬಹುತೇಕ ಕಡೆ ಹಿಡಿತವನ್ನು ಸಾಧಿಸಿದೆ. ಇದರ ನಡುವೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು, ಕಾಂಗ್ರೆಸ್​ ಮತ್ತೆ ೇತ್ರವನ್ನು ತೆಕ್ಕೆಗೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ರಾಜಕೀಯವಾಗಿ ಏರುಪೇರುಗಳು ಕಂಡು ಬಂದಿವೆ. ಇದನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಮೊದಲ ಹಂತವಾಗಿ ಗ್ರಾಪಂ ಚುನಾವಣೆಗಳನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು ಪ್ರಾಬಲ್ಯ ಉಳಿಸಿಕೊಳ್ಳಲು ಕಸರತ್ತು ನಡೆಸಲಾಗುತ್ತಿದೆ.

ಮಹಿಳೆಯರ ಅಧಿಪತ್ಯ:
ಜಿಲ್ಲೆಯ ಚಿಂತಾಮಣಿ, ಗೌರಿಬಿದನೂರು ಮತ್ತು ಶಿಡ್ಲಟ್ಟದಲ್ಲಿಯೇ ಮಹಿಳೆಯರಿಗೆ ಹೆಚ್ಚಿಗೆ ಅಧ್ಯಕ್ಷ ಸ್ಥಾನಗಳು ಒಲಿದಿವೆ. ಇದರಲ್ಲಿ ಮುಂಬರುವ ಜಿಪಂ ಮತ್ತು ತಾಪಂ, ಲೋಕಸಭಾ ಚುನಾವಣೆಯ ಲೆಕ್ಕಾಚಾರವೇ ಅಡಗಿದೆ. ಪಕ್ಷದ ಪರವಾಗಿ ಪ್ರಚಾರ ಕೈಗೊಂಡು, ಅಧಿಕಾರವನ್ನು ಕೊಡಿಸುವ ಗಟ್ಟಿ ನಾಯಕರು ಒತ್ತಡ ಹೇರಿ, ಕುಟುಂಬಸ್ಥ ಮಹಿಳಾ ಜನಪ್ರತಿಧಿಯನ್ನು ಗದ್ದುಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಅನುಗುಣವಾಗಿ ಚುನಾವಣೆಯಲ್ಲಿ ಹೆಚ್ಚಿನ ಮೀಸಲಾತಿ ಸಿಕ್ಕಿರುವುದು ವರದಾಯಕವಾಗಿದೆ.

ಗ್ರಾಪಂ ಅಧ್ಯಕ್ಷ ಸ್ಥಾನವು ಈ ಹಿಂದೆಯೇ ಸಿಗಬೇಕಾಗಿತ್ತು. ಆದರೆ, ಕೆಲ ಕಾರಣಗಳಿಂದ ಕೊನೆ ಕ್ಷಣದಲ್ಲಿ ತಪ್ಪಿ ಹೋಗಿದೆ. ಈ ಬಾರಿ ಅಧ್ಯಕ್ಷ ಸ್ಥಾನ ಸಿಗುವುದರೊಂದಿಗೆ ಇತ್ತೀಚೆಗೆ ನಿಧನರಾದ ಪತಿಯ ಕನಸು ನನಸಾಗಿದೆ. ಎಲ್ಲರ ಸಹಕಾರದೊಂದಿಗೆ ಅಭಿವೃದ್ಧಿ ಅಭಿವೃದ್ಧಿಗೆ ಶ್ರಮಿಸಲಾಗುವುದು.

ಮಾಲಿನಿ, ನಂದಿ ಗ್ರಾಪಂ ಅಧ್ಯೆ (ಚುನಾವಣಾ ವಿಜಯೋತ್ಸವದಲ್ಲಿ ಹೇಳಿಕೆ)

ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿಗೆ ಹೆಚ್ಚಿನ ಮಹಿಳೆಯರು ಆಯ್ಕೆಯಾಗಿರುವುದು ಖುಷಿಯ ವಿಚಾರ. ಆದರೆ, ಅವರು ಯಾರನ್ನು ಆವಲಂಬಿಸದೇ ನೇರವಾಗಿ ಆಡಳಿತ ನಡೆಸಿದಾಗ ಮಾತ್ರ ಸಾರ್ಥಕತೆ ಬರುತ್ತದೆ. ಇವರ ಹೆಸರಿನಲ್ಲಿ ಬೇರೆ ಯಾರೋ ದರ್ಬಾರ್​ ನಡೆಸಿದರೆ, ಮೀಸಲಾತಿ ಮತ್ತು ಅವಕಾಶ ಸಿಕ್ಕಿ ಏನ್​ ಪ್ರಯೋಜನ?

ಚಂದ್ರಶೇಖರ್​, ಸ್ಥಳಿಯ ನಿವಾಸಿ, ಚಿಕ್ಕಬಳ್ಳಾಪುರ

ಗ್ರಾಪಂ ವಾರು ಅಧ್ಯಕ್ಷ ಸ್ಥಾನ
ತಾಲೂಕು ಪುರುಷರು ಮಹಿಳೆಯರು
ಗೌರಿಬಿದನೂರು 10 21
ಮಂಚೇನಹಳ್ಳಿ 2 4
ಚಿಕ್ಕಬಳ್ಳಾಪುರ 9 14
ಗುಡಿಬಂಡೆ 1 7
ಶಿಡ್ಲಟ್ಟ 6 18
ಬಾಗೇಪಲ್ಲಿ 3 13
ಚೇಳೂರು 4 8
ಚಿಂತಾಮಣಿ 10 22

ಅಧ್ಯಕ್ಷರು ಉಪಾಧ್ಯಕ್ಷರು
ಮಹಿಳೆಯರು 107 45
ಪುರುಷರು 45 107

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net