ಅಗಲಿದ ಪುನೀತ್​ಗಾಗಿ ಹಬ್ಬವನ್ನೇ ಸ್ಥಗಿತಗೊಳಿಸಿದ ಗ್ರಾಮಸ್ಥರು; ದೇವಸ್ಥಾನದ ಮುಂದೆ ಫೋಟೋ ಹಿಡಿದು ಶ್ರದ್ಧಾಂಜಲಿ..

Untitled
Published on

ಹಾವೇರಿ: ಅಗಲಿರುವ ಖ್ಯಾತ ನಟ ಪುನೀತ್ ರಾಜಕುಮಾರ್​ಗೆ ಗೌರವ ಸಲ್ಲಿಸುವ ಸಲುವಾಗಿ ಇಲ್ಲೊಂದು ಕಡೆ ಹಬ್ಬವನ್ನೇ ಸ್ಥಗಿತಗೊಳಿಸಲಾಗಿದೆ. ಹಬ್ಬದ ಸಂಭ್ರಮದ ನಡುವೆ ಅಪ್ಪು ಫೋಟೋ ಹಿಡಿದು ಶ್ರದ್ಧಾಂಜಲಿ ಸಲ್ಲಿಸಿ ಅಪ್ಪು ಅಪ್ಪು ಎಂದು ಘೋಷಣೆಯನ್ನು ಕೂಗಲಾಗಿದೆ.

ದೀಪಾವಳಿ ಪ್ರಯುಕ್ತ ನಡೆಯುವ ರಾಜ್ಯಮಟ್ಟದ ಹೋರಿ ಬೆದರಿಸುವ ಹಬ್ಬದಲ್ಲಿ ಇಂಥದ್ದೊಂದು ಶ್ರದ್ಧಾಂಜಲಿ ಸಲ್ಲಿಕೆ ಆಗಿದೆ. ಮಾತ್ರವಲ್ಲ, ಅಪ್ಪು ಅಗಲಿಕೆ ಹಿನ್ನೆಲೆಯಲ್ಲಿ ಈ ಗ್ರಾಮದ ಯುವಕರು ಹೋರಿ ಬೆದರಿಸುವ ಹಬ್ಬವನ್ನೇ ಸ್ಥಗಿತಗೊಳಿಸಿದ್ದಾರೆ.

ಹಾವೇರಿ ತಾಲೂಕಿನ ಕುಳೇನೂರು ಗ್ರಾಮದಲ್ಲಿ ಪ್ರತಿವರ್ಷ ಈ ರಾಜ್ಯಮಟ್ಟದ ಹೋರಿ ಬೆದರಿಸುವ ಹಬ್ಬ ನಡೆಯುತ್ತದೆ. ಈ ಸಲ ಅದನ್ನು ಸ್ಥಗಿತಗೊಳಿಸಿದ ಗ್ರಾಮಸ್ಥರು ಹತ್ತು ನಿಮಿಷಗಳ ಕಾಲ ಮೌನಾಚರಿಸಿ ಶಾಂತಿ ಕೋರಿದ್ದಾರೆ. ಗ್ರಾಮದ ಬಸವೇಶ್ವರ ದೇವಸ್ಥಾನದ ಮುಂದೆ ಅಪ್ಪು ಫೋಟೋ ಹಿಡಿದು, ಅಪ್ಪು ಅಪ್ಪು ಎಂದು ಕೂಗಿ ಅಭಿಮಾನ ಮೆರೆದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net