ಬೋನಿಗೆ ಬಿದ್ದ ಚಿರತೆ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

raichur
raichur
Published on

 ರಾಯಚೂರು ಕಳೆದ ಕೆಲ ತಿಂಗಳುಗಳಿಂದ ತಾಲೂಕಿನ ಡಿ.ರಾಂಪುರ ಹಾಗೂ ಸುತ್ತಲಿನ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೆ ಭಾನುವಾರ ಸೆರೆ ಸಿಕ್ಕಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಇತ್ತೀಚೆಗೆ ಹಸು, ಕುರಿಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಜನರಲ್ಲಿ ಆತಂಕ ಮೂಡಿಸಿತ್ತು. ಶನಿವಾರವೇ ಗ್ರಾಮಸ್ಥರೆಲ್ಲ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಎರಡು ಬೋನು ಇಟ್ಟು ಸಾಕಷ್ಟು ಪ್ರಯತ್ನ ಪಟ್ಟರು ಚಾಲಾಕಿ ಚಿರತೆ ಸೆರೆ ಸಿಕ್ಕಿರಲಿಲ್ಲ.

ಬೋನಿನ ಬಳಿ ಬಂದು ಹೋಗಿತ್ತು. ಮೇಕೆ, ನಾಯಿ ತಿಂದು ಹಾಕಿದ್ದ ಚಿರತೆ ವ್ಯಕ್ತಿಯೊಬ್ವರ ಮೇಲೆ ಧಾಳಿ ನಡೆಸಿತ್ತು. ಅದರೆ ವ್ಯಕ್ತಿ ತಪ್ಪಿಸಿಕೊಂಡು ಬಂದಿದ್ದರು. ಗ್ರಾಮಸ್ಥರು ನಿತ್ಯವೂ ಭಯದಲ್ಲಿ ಜನರು ಜೀವನ ನಡೆಸುವಂತಾಗಿತ್ತು.

ಕೊನೆಗೆ ಎರಡು ವರ್ಷದ ಗಂಡು ಚಿರತೆ ಬೋನಿಗೆ ಸಿಲುಕಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ವೈದ್ಯರು ಭೇಟಿ ನೀಡಿದ್ದು ತಪಾಸಣೆ ನಡೆಸುತ್ತಿದ್ದಾರೆ. ಚಿರತೆಯನ್ನು ಬೇರೆಡೆ ಬಿಟ್ಟು ಸ್ಥಳಾಂತರಿಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಾದೇಶಿಕ ಅರಣ್ಯ ಅಧಿಕಾರಿ ರಾಜೇಶ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net