ಹಳ್ಳಿಕಾರರು ಶೈಕ್ಷಣಿಕವಾಗಿ ಬೆಳವಣಿಗೆ ಹೊಂದಬೇಕು

5 ckm 3
ಚಿಕ್ಕಮಗಳೂರಿನ ಕೋಟೆ ಸಮೀಪ ನ್ಯೂ ಬ್ರೆÊಟ್ ಪ್ಯೂಚರ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶನಿವಾರ ರಾಜ್ಯ ಮಟ್ಟದ ಹಳ್ಳಿಕಾರರ ಸಮಾವೇಶದ ಪೂರ್ವಭಾವಿ ಸಭೆಯನ್ನು ಉz್ದೆÃಶಿಸಿ ರಾಜ್ಯ ಹಳ್ಳಿಕಾರರ ಸಂಘದ ಉಪಾಧ್ಯಕ್ಷ ಕೆ.ಎಂ.ನಾಗರಾಜ್ ಮಾತನಾಡಿದರು. ಟಿ.ಶ್ರೀನಿವಾಸ ಮೂರ್ತಿ, ಜಿ.ನಾಗರಾಜ್, ಎಚ್.ಎನ್.ಮಹಾಲಿಂಗಯ್ಯ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಹಳ್ಳಿಕಾರ ಸಮುದಾಯ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಮುನ್ನೆಡೆ ಸಾಧಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಜನಾಂಗವನ್ನು ಒಗ್ಗೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ರಾಜ್ಯ ಹಳ್ಳಿಕಾರರ ಸಂಘದ ಉಪಾಧ್ಯಕ್ಷ ಕೆ.ಎಂ.ನಾಗರಾಜ್ ತಿಳಿಸಿದರು.

ನಗರದ ಕೋಟೆ ಸಮೀಪ ನ್ಯೂ ಬ್ರೆÊಟ್ ಪ್ಯೂಚರ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶನಿವಾರ ರಾಜ್ಯ ಮಟ್ಟದ ಹಳ್ಳಿಕಾರರ ಸಮಾವೇಶದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮುದಾಯವನ್ನು ಪ್ರವರ್ಗ ೩ಕ್ಕೆ ಸೇರ್ಪಡೆಗೊಳಿಸಿದ ಕಾರಣ ಯಾವುದೇ ಸವಲತ್ತು ದೊರೆಯದೇ ಸಂಕಷ್ಟದ ಸ್ಥಿತಿಯಿದೆ. ಹೀಗಾಗಿ ಜನಾಂಗವನ್ನು ಪ್ರ.ವರ್ಗ ೧ಕ್ಕೆ ಸೇರ್ಪಡೆಗೊಳಿಸಿ ಹಿಂದುಳಿದ ವರ್ಗಕ್ಕೆ ದೊರೆಯುವ ಸಕಲ ಸೌಲಭ್ಯಗಳನ್ನು ಹಳ್ಳಿಕಾರರಿಗೆ ಒದಗಿಸಿ ಆರ್ಥಿಕವಾಗಿ ಶಕ್ತಿ ತುಂಬಬೇಕು ಎಂದು ಆಗ್ರಹಿಸಿದರು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆಲೆಸಿರುವ ಹಳ್ಳಿಕಾರ ಸಮುದಾಯವನ್ನು ಒಂದೆಡೆಗೆ ಸೇರಿಸುವ ದೃಷ್ಟಿ ಯಿಂದ ಅ. ೨೭ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಬೃಹತ್ ಹಳ್ಳಿಕಾರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಿಂದ ಸಮಾಜದ ಮುಖಂಡರುಗಳು ಒಟ್ಟಾಗಿ ಭಾಗವಹಿಸಿ ರಾಜ್ಯಸರ್ಕಾರದ ಮುಂದೆ ಶಕ್ತಿ ತೋರ್ಪಡಿಸಬೇಕು ಎಂದರು.
ಸಮುದಾಯದಿAದ ಸಂವರ್ಧನೆಗೊAಡಿರುವ ಹಳ್ಳಿಕಾರ್ ತಳಿಯ ರಾಸುಗಳ ಪ್ರಾಮುಖ್ಯತೆ, ಉಪಯೋಗಗಳು ಮತ್ತು ತಳಿಯ ಸಂರಕ್ಷಣೆಗಾಗಿ ಸಮುದಾಯವು ನೀಡಿರುವ ಕೊಡುಗೆಗಳನ್ನು ಪ್ರಸ್ತುತಪಡಿಸಲಾಗುವುದು. ಸಮುದಾಯದ ಸ್ಥಿತಿಗತಿಗಳ ಬಗ್ಗೆ ಆತ್ಮಾವಲೋಕನ ಮತ್ತು ಭವಿಷ್ಯದ ಅವಕಾಶಗಳನ್ನು ಉಪಯೋಗಿಸಿಕೊಳ್ಳುವ ಕುರಿತು ಬೆಳಕು ಚೆಲ್ಲಲಾಗುವುದು ಎಂದು ಹೇಳಿದರು.
ಈ ಕಾಲಘಟ್ಟದಲ್ಲಿ ಜನಾಂಗದ ಅಭಿವೃದ್ಧಿಗೆ ಹೋರಾಟ ರೂಪಿಸಿದರೆ ಮಾತ್ರ ಭವಿಷ್ಯದಲ್ಲಿ ಮಕ್ಕಳಿಗೆ ಅನುಕೂಲ ಒದಗಿಸಲು ಸಾಧ್ಯ. ಇದರಿಂದ ಕುಟುಂಬದ ನಿರ್ವಹಣೆ, ವಿದ್ಯಾಭ್ಯಾಸ ಹಾಗೂ ಸಾತ್ವಿಕ ಜೀವನ ನಡೆಸಲು ಸಹಕಾರಿಯಾಗಲಿದೆ. ಹೀಗಾಗಿ ಸಮಾವೇಶಕ್ಕೆ ಸರ್ವರು ಕುಟುಂಬ ಸಮೇತ ಆಗಮಿಸಿ ಹಳ್ಳಿಕಾರರ ಶಕ್ತಿ ಪ್ರದರ್ಶಿಸಲು ಮುಂದಾಗಿ ಎಂದು ಕರೆ ನೀಡಿದರು.
ಜಿಲ್ಲಾ ಹಳ್ಳಿಕಾರ ಯುವಕರ ಸಂಘದ ಅಧ್ಯಕ್ಷ ಕೋಟೆ ಸೋಮಣ್ಣ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟಾರೆ ೨,೫೦೦ಕ್ಕೂ ಹೆಚ್ಚು ಜನಾಂಗದ ಕುಟುಂಬಗಳು ವಾಸಿಸುತ್ತಿರುವ ಕಾರಣ ಸಂಘಕ್ಕೆ ಸಮುದಾಯ ಭವನದ ಅವಶ್ಯಕತೆ ಬಹಳಷ್ಟಿದೆ. ಹೀಗಾಗಿ ಬೀಕನಹಳ್ಳಿ ಸಮೀಪದ ೧.೭೦ ಲಕ್ಷ ರೂ.ಗಳನ್ನು ಸರ್ಕಾರಕ್ಕೆ ವ್ಯಯಿಸಿದ್ದು, ಜಾಗವೊಂದು ಗುರುತಿಸಿ ಭವನ ನಿರ್ಮಿಸಲು ಸಹಕಾರ ನೀಡಬೇಕು ಎಂದರು.
ರಾಜ್ಯದ ಸುಮಾರು ೧೧ ಜಿಲ್ಲೆಗಳಲ್ಲಿ ಹಳ್ಳಿಕಾರರ ಜನಾಂಗವಿದೆ. ಆ ನಿಟ್ಟಿನಲ್ಲಿ ರಾಜ್ಯ ಸಂಘವು ಪ್ರತಿ ಜಿಲ್ಲೆಗೆ ತೆರಳಿ ಸಮಾವೇಶದ ಸಂಬAಧ ಪೂರ್ಭಭಾವಿ ಸಭೆ ನಡೆಸಿ ಆಹ್ವಾನಿಸುತ್ತಿದೆ. ಅದರಂತೆ ಇದೀಗ ಚಿಕ್ಕಮಗಳೂರು ಆಗಮಿಸಿ ಜನಾಂಗವನ್ನು ಒಗ್ಗೂಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಶ್ರೀನಿವಾಸಮೂರ್ತಿ, ನಿರ್ದೇಶಕರಾದ ಜಿ.ನಾಗರಾಜ್, ಎಚ್.ಎನ್.ಮಹಾಲಿಂಗಯ್ಯ, ಎಲ್.ವಸಂತ್‌ಕುಮಾರ್, ಸಿ.ಎಚ್.ಶ್ರೀನಿವಾಸ್, ಜಿಲ್ಲಾ ಸಂಘದ ಉಪಾಧ್ಯಕ್ಷ ಶುಭಾಸ್, ಪ್ರಧಾನಕಾರ್ಯದರ್ಶಿ ಶಿವಪ್ರಕಾಶ್, ಸಂಘಟನಾ ಕಾರ್ಯದರ್ಶಿ ಬಿ. ಎಸ್.ಬಸವರಾಜ್, ಖಜಾಂಚಿ ಜಿ.ವೆಂಕಟೇಶ್, ನಿರ್ದೇಶಕರಾದ ಸಿ.ಬಿ.ರಘು, ಸಿ.ಎನ್.ಸೋಮಶೇಖರ್, ಎಚ್.ಕೆ.ಸೋಮಶೇಖರ್, ಬ್ಯಾಟೇಗೌಡ, ಕೆ.ಪಿ.ನಾಗೇಶ್, ದ್ವಾರಕೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net