

ಮೂಡಲಗಿ: ಮಸಗುಪ್ಪಿ ಗ್ರಾಮದಲ್ಲಿ ಭಕ್ತರೆಲ್ಲ ಒಗ್ಗೂಡಿ ಕೋಟ್ಯಂತರ ರೂ. ವೆಚ್ಚದಲ್ಲಿ ಪುರಾತನ ಶ್ರೀ ಮಹಾಲ$್ಮ ದೇವಸ್ಥಾನ ಜೀಣೋರ್ದ್ಧಾರಗೊಳಿಸಿ ಭವ್ಯ ಮಂದಿರ ನಿರ್ಮಿಸುವ ಮೂಲಕ ತಾಲೂಕಿನಲ್ಲೇ ಮಾದರಿಯಾಗಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಶ್ರೀ ಮಹಾಲ$್ಮ ದೇವಸ್ಥಾನದ 3ನೇ ವಾರ್ಷಿಕೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಧಾಮಿಕ ಸಭೆ ಹಾಗೂ ಹೋಮ&ಹವನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಾಗಲೇ ಗ್ರಾಮದ ಮಹಾಲ$್ಮ ಪ್ರೌಢ ಶಾಲೆ ಕೊಠಡಿ ನಿರ್ಮಾಣಕ್ಕೆ 10 ಲ ರೂ., ಶ್ರೀ ಮಹಾಲ$್ಮ ದೇವಸ್ಥಾನಕ್ಕೆ 5 ಲ ರೂ. ಅನುದಾನ ನೀಡಲಾಗಿದೆ. ಗ್ರಾಮದ ಸಂಕೇಶ್ವರ&ಸಂಗಮ (ರಾ.ಹೆ 51) ರಸ್ತೆಯಿಂದ ಮಹಾಲ$್ಮ ದೇವಸ್ಥಾನದವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ 15 ಲ ರೂ. ಘೋಷಿಸಿ ಮುಂಬರುವ ದಿನಗಳಲ್ಲಿ ಓಪನ್ ಜಿಮ್ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ಜಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ, ಉಪ್ಪಾರಹಟ್ಟಿ ಸಿದ್ಧಾರೂಢ ಮಠದ ನಾಗೇಶ್ವರ ಸ್ವಾಮೀಜಿ, ಹುಣಶ್ಯಾಳ ಪಿ.ಜಿಯ ನಿಜಗುಣ ದೇವರು, ತಪಶಿ ರೇವಣ್ಣಸಿದ್ದೇಶ್ವರ ಮಠದ ಸುರೇಶ ಮಹಾರಾಜರು, ಕಪರಟ್ಟಿಯ ಬಸವರಾಜ ಸ್ವಾಮೀಜಿ, ಗ್ರಾಪಂ ಅಧ್ಯ ಬಸವರಾಜ ಭುಜನ್ನವರ, ಭರಮಪ್ಪ ಗಂಗಣ್ಣವರ, ಸಂಜು ಹೋಸಕೊಟೆ, ನಿಂಗಪ್ಪ ತೋಳಿ, ಲಕ್ಕಪ್ಪ ಮಕರದ, ವಿರೂಪಾ ಕೊಳವಿ, ಹನುಮಂತ ಕುಲಕರ್ಣಿ, ಬಸವರಾಜ ಗಾಡವಿ, ಕೃಷ್ಣ ಆಶಿರೊಟ್ಟಿ, ಲ$್ಮಣ ಗುಡಪ್ಪಗೋಳ, ಈಶ್ವರ ಗಾಡವಿ ಇತರರಿದ್ದರು.