ಗ್ರಾಮಸ್ಥರು ರಸಿದ್ದ ಜಿಂಕೆಗಿಲ್ಲ ಚಿಕಿತ್ಸೆ

02 05 2025 KLR_PAGE_03
ಗಾಯಗೊಂಡಿದ್ದ ಜಿಂಕೆಯನ್ನು ಕದರೀಪುರ ಗ್ರಾಮಸ್ಥರು ಅರಣ್ಯ ರಕ್ಷಕರಿಗೆ ನೀಡುತ್ತಿರುವುದು.
Published on

ಕದರೀಪುರ : ನೀರು ಅರಸಿ ಕಾಡಿನಿಂದ ನಾಡಿಗೆ ಬಂದು ಬಾವಿಗೆ ಬಿದ್ದು ಗಾಯಗೊಂಡಿದ್ದ ಜಿಂಕೆಯನ್ನು ರಸಿದ ಗ್ರಾಮಸ್ಥರು ಅರಣ್ಯ ರಕ್ಷಕರಿಗೆ ಒಪ್ಪಿಸಿದ್ದರೂ, ರ್ನಿಲಕ್ಷ$್ಯ ವಹಿಸಿದ ಅವರು ಚಿಕಿತ್ಸೆ ನೀಡದೇ ಕಾಡಿಗೆ ಬಿಟ್ಟಿದ್ದಾರೆ.

‘ಕೋಲಾರ ತಾಲೂಕು ಕದರೀಪುರ ಸಮೀಪದ ಬಾವಿಗೆ ಬಿದ್ದು ಕಾಲು ಮುರಿದು ಗಾಯಗೊಂಡಿದ್ದ ಚಿಗರೆಯನ್ನು ಸಂರಸಿ ಗ್ರಾಮಕ್ಕೆ ತಂದಿದ್ದ ಗ್ರಾಮಸ್ಥರು ಅರಣ್ಯ ರಕ್ಷಕರಿಗೆ ಹಸ್ತಾಂತರಿಸಿದ್ದರು. ಆದರೆ, ಚಿಕಿತ್ಸೆ ನೀಡುತ್ತೇವೆ ಎಂದು ಜಿಂಕೆ ಹಿಡಿದುಕೊಂಡು ಹೋದವರು ಚಿಕಿತ್ಸೆ ಕೊಡಿಸದೆ ಹಾಗೇ ಬಿಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅರಣ್ಯ ರಕರಾದ ರಾಮಾಂಜಿನಪ್ಪ ಮತ್ತು ರಾಮಣ್ಣ ಆರೋಪಿಗಳು.

ಗೊತ್ತಾದದ್ದು ಹೇಗೆ?: ಚಿಕಿತ್ಸೆ ನೀಡುತ್ತೇವೆ ಎಂದು ಜಿಂಕೆ ತೆಗೆದುಕೊಂಡು ಹೋದ ನಂತರ ಸ್ಥಳಿಯರು ಅನುಮಾನಗೊಂಡು ಕರೆಮಾಡಿದಾಗ ಅರಣ್ಯ ರಕ್ಷಕರು, "ಇವತ್ತು ಬಸವ ಜಯಂತಿ ಇದ್ದಿದ್ದರಿಂದ ಪಶು ಆಸ್ಪತ್ರೆ ರಜೆ ಇತ್ತು, ಹಾಗಾಗಿ ನಾವೇ ಜಿಂಕೆ ಕಾಲಿಗೆ ಕೆಮ್ಮಣ್ಣು ಹಾಕಿ, ಬಟ್ಟೆ ಕಟ್ಟಿದ್ದೆವು, ಆ ವೇಳೆ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಿದೆ' ಎಂದು ವಿವರಿಸಿದ್ದಾರೆ. ಆಗ ಗ್ರಾಮಸ್ಥರು ಇದಕ್ಕಾ ನಾವು ನಿಮಗೆ ಜಿಂಕೆ ಕೊಟ್ಟಿದ್ದು ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಇಲ್ಲಸಲ್ಲದ ಸಬೂಬು ಹೇಳಿ ತಪ್ಪಿಸಿಕೊಂಡಿದ್ದಾರೆ. ಕರ್ತವ್ಯ ರ್ನಿಲಕ್ಷ$್ಯವಹಿಸಿದ ಇವರ ವಿರುದ್ಧ ಕ್ರಮವಾಗಬೇಕು ಎಂದು ಗ್ರಾಮಸ್ಥರಾದ ಶಿಕ ಕೆ.ಎಂ.ಮಂಜುನಾಥ್​, ಮುನಿನಾರಾಯಣಪ್ಪ, ನರಸಿಂಹಪ್ಪ ವಿ.ಮಂಜುನಾಥ್​, ವೆಂಕಟರವಣಪ್ಪ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net