

ವಿಜಯವಾಣಿ ಸುದ್ದಿಜಾಲ ಹೆಬ್ರಿ ಹೆಬ್ರಿ ಹಾಗೂ ಸಿದ್ದಾಪುರ ಸಂಪರ್ಕಿಸುವ ಕಂಚರಕಾಳು ಎಂಬಲ್ಲಿ ಹೊಸ ಸೇತುವೆ ನಿರ್ವಾಣ ಹಿನ್ನೆಲೆ ಬದಲಿ ರಸ್ತೆ ನಿರ್ಮಿಸಲಾಗಿತ್ತು. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬದಲಿ ರಸ್ತೆಯಲ್ಲಿ ನೀರು ತುಂಬಿ ಬಂದ್ ಆಗಿರುವುದರಿಂದ ಸಾರ್ವಜನಿಕರು ಹೆಬ್ರಿಯ ಲಯನ್ಸ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ರಸ್ತೆ ಸಂಪರ್ಕ ಕಡಿತವಾಗಿರುವುದರಿಂದ ಮಂಡಿ ಮೂರ್ಕೈ, ಮಡಾಮಕ್ಕಿ ಕಡೆಯಿಂದ ಬರುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ, ಆಸ್ಪತ್ರೆಗೆ ಹೋಗುವರಿಗೆ ಭಾರಿ ಹಿನ್ನಡೆಯಾಗಿದೆ. ಹೆಬ್ರಿಗೆ ಹತ್ತಾರು ಕಿಲೋ ಮೀಟರ್ ಸುತ್ತು ಬಳಸಿ ಹೋಗಬೇಕಾದ ಅನಿವಾರ್ಯತೆ ಇದೆ. ಇದರಿಂದ ಬೇಸತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಬದಲಿ ರಸ್ತೆ ಸಮರ್ಪಕವಿಲ್ಲ ಬೇಳಂಜೆ, ಮೀನುಗದ್ದೆ, ಆರ್ಡಿ ಮೂಲಕ ಹೋಗುವ ಬದಲಿ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದೆ. ಸಣ್ಣ ರಸ್ತೆ ಆಗಿರುವುದರಿಂದ ಬಸ್ ಓಡಾಡಲು ಸಮಸ್ಯೆ ಆಗುತ್ತದೆ. ಶ್ರೀದಲ್ಲೇ ಬದಲಿ ರಸ್ತೆ ದುರಸ್ತಿ ವಾಡುವಂತೆ ಅಧಿಕಾರಿಗಳನ್ನು ಮನವಿ ವಾಡಿದರು. ಸಾರ್ವಜನಿಕರಾದ ಬಾಲಕೃಷ್ಣ ಶೆಟ್ಟಿ ಮಡಾಮಕ್ಕಿ, ರಂಜಿತ್ ನಾಯ್ಕ, ಸುರೇಂದ್ರ, ಮೋಹನ್, ಪೂರ್ಣೇಶ್, ಬಾಲಣ್ಣ, ಪ್ರದೀಪ್ ಇದ್ದರು.
ಮೇ ತಿಂಗಳಿನಲ್ಲಿ ಕಾಮಗಾರಿಗೆ ಅನುಮೋದನೆ ದೊರಕಿದ್ದರೆ, ಕಾಮಗಾರಿ ಆರಂಭಿಸಬಾರದಿತ್ತು. ರಸ್ತೆ ಸಂಪರ್ಕ ಇಲ್ಲದೆ ಅನೇಕ ಶಾಲಾ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರಿಗೆ ಸಮಸ್ಯೆಯಾಗಿದೆ. ಹೆಬ್ರಿ ತಾಲೂಕು ಕೇಂದ್ರ ಆಗಿರುವುದರಿಂದ ಎಲ್ಲ ಕೆಲಸಕ್ಕೆ ಇಲ್ಲಿ ಬರಬೇಕಾಗುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮಗೆ ಸಮಸ್ಯೆ ಆಗಿರುವುದು ನಿಜ. ಅವರ ಕೋರಿಕೆಯಂತೆ ಎರಡು ದಿನ ಗಡುವು ನೀಡಲಾಗುವುದು. ಒಂದು ವೇಳೆ ಇಲಾಖೆ ವಾತು ತಪ್ಪಿದ್ದಲ್ಲಿ ಪ್ರತಿಭಟಿಸಿ ಲೋಕೋಪಯೋಗಿ ಇಲಾ ಎಗೆ ಮುತ್ತಿಗೆ ಹಾಕಲಾಗುವುದು. ಕುಚ್ಚೂರು ಶ್ರೀಕಾಂತ್ ಪೂಜಾರಿ, ಜೆಡಿಎಸ್ ಮುಖಂಡ ಕಾರ್ಕಳ. ನಮಗೆ ಮೇ ತಿಂಗಳಿನಲ್ಲಿ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಮಳೆ ಬೇಗನೆ ಆರಂಭವಾಗಿದ್ದರಿಂದ ಕಾಮಗಾರಿಗೆ ಹಿನ್ನಡೆಯಾಗಿದೆ. ಭಾರಿ ಮಳೆ ಸುರಿಯುತ್ತಿರುವುದರಿಂದ ತಾತ್ಕಾಲಿಕವಾಗಿ ನಿರ್ಮಿಸಿದ ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ರಸ್ತೆ ಬಂದ್ ವಾಡಿದ್ದೇವೆ. ನಮಗೆ ಎರಡು ದಿನ ಸಮಯ ಕೊಡಿ ತಾತ್ಕಾಲಿಕ ರಸ್ತೆ ದುರುಸ್ತಿ ವಾಡಿಕೊಡಲಾಗುವುದು. ಮಳೆ ಕಡಿಮೆಯಾದ ಕೂಡಲೇ ಸೇತುವೆ ಕೆಲಸ ಮುಗಿಸುತ್ತೇವೆ. ಮಿಥುನ್, ಜೆಇ, ಲೋಕೋಪಯೋಗಿ ಇಲಾಖೆ, ಕಾರ್ಕಳ https://www.vijayavani.net/traditional-rice-farming-work-begins https://www.vijayavani.net/preservation-of-kaup-history-through-literature