ಮನುಮೈನಹಟ್ಟಿ ಗ್ರಾಮಸ್ಥರ ಪ್ರತಿಭಟನೆ

ctd 24 strikeeee
Published on

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನಲ್ಲಿರುವ ಮನುಮೈನಹಟ್ಟಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಗುರುವಾರ ಗ್ರಾ ಮಸ್ಥರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಕಂದಾಯ ಗ್ರಾಮಕ್ಕಾಗಿ ಅನೇಕ ಮನವಿಗಳನ್ನು ಮಾಡಿದರೂ ಪ್ರಯೋಜನವಾಗಿಲ್ಲ.ಲಂಬಾಣಿಹಟ್ಟಿ,ಹಾಡಿ,ಗೊಲ್ಲರಹಟ್ಟಿ,ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವಂತೆ ರಾಜ್ಯಸರ್ಕಾರ ಆದೇಶಿಸಿದ್ದರೂ ಅನುಷ್ಠಾನವಾಗಿಲ್ಲ. ಬೇಡಿಕೆ ಈಡೇರಿಸದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಗ್ರಾಪಂ ಸದಸ್ಯರಾದ ಜಯಂತಿ,ಕೆ.ಟಿ.ಶಿವಣ್ಣ,ಎಚ್.ನಿರಂಜನ,ಎಂ.ರೋಹಿಣಿಬಾಯಿ,ಶಾಂತಮ್ಮ ಹಾಗೂ,ನರೇನಹಳ್ಳಿ ಅರುಣ್ ಕು ಮಾರ್,ಕೆ.ತಿಪ್ಪೇಸ್ವಾಮಿ,ಟಿ.ತಿಪ್ಪೇ ಸ್ವಾಮಿ,ಪ್ರಕಾಶ,ರಾಜಣ್ಣ,ಮಂಜುನಾಥ,ಎನ್.ಮಲ್ಲೇಶ್,ಸೀನಾನಾಯ್ಕ,ಭಾಗ್ಯಮ್ಮ,ಎಸ್.ರಮೇಶ್ ಮೊ ದಲಾದ ಗ್ರಾಮಸ್ಥರು,ಸೇವಾಲಾಲ್ ಸೇವಾ ಸಂಘ,ದಂಡಿನ ಮಾರಮ್ಮ ಸೇವಾ ಸಂಘ,ಅಂಜನೇಯಸ್ವಾಮಿ ಸೇವಾ ಸಂಘ,ಮಹಿಳಾ ಸಂಘ ದ ಸದಸ್ಯರು ಪ್ರತಿಭಟನೆಯಲ್ಲಿ ಇದ್ದರು.

ಕಂದಾಯ ಗ್ರಾಮಕ್ಕೆ ಒತ್ತಾಯಿಸಿ ಚಳ್ಳಕೆರೆ ತಾಲೂಕು ಮನುಮೈನಹಟ್ಟಿಗ್ರಾಮಸ್ಥರು ಗುರುವಾರ ಡಿಸಿ ಕಚೇರಿ ಬಳಿ ಪ್ರತಿಭಟಿಸಿದರು. ಜಯಂತಿ,ಕೆ.ಟಿ.ಶಿವಣ್ಣ,ಎಚ್.ನಿರಂಜನ,ಎಂ.ರೋಹಿಣಿಬಾಯಿ,ಶಾಂತಮ್ಮ ಹಾಗೂ,ನರೇನಹಳ್ಳಿ ಅರುಣ್‌ಕುಮಾರ್,ಕೆ.ತಿಪ್ಪೇಸ್ವಾಮಿ ಇತರರು ಇದ್ದರು.

-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net