ಪ್ರತಿಭಟನೆಗೆ ಎತ್ತು, ಚಕ್ಕಡಿ, ಗ್ರಾಪಂ ಸ್ಥಾನ ಬಿಡಲೊಪ್ಪದ ಜಿಗಳೂರ ಗ್ರಾಮಸ್ಥರು

RON PROTEST
Published on

ರೋಣ: ನಮ್ಮ ಪ್ರಾಣ ಬೇಕಿದ್ದರೆ ಕೊಡುತ್ತೇವೆ. ಆದರೆ, ಯಾವುದೇ ಕಾರಣಕ್ಕೂ ಜಿಗಳೂರ ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನವನ್ನು ಬೇರೆ ಗ್ರಾಮಕ್ಕೆ ಬಿಟ್ಟು ಕೊಡುವುದಿಲ್ಲ.

ಪ್ರತಿಭಟನಾನಿರತ ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಜಿಗಳೂರ ಗ್ರಾಮಸ್ಥರು ಒಕ್ಕೂರಲಿನ ನಿರ್ಧಾರ ಕೈಗೊಂಡರು.


ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಮುಂದೆ ಹಮ್ಮಿಕೊಂಡಿದ್ದ ಎರಡನೇ ದಿನದ ಧರಣಿಯಲ್ಲಿ ಜಿಗಳೂರ ಗ್ರಾಮಸ್ಥರು ಒಗ್ಗಟ್ಟಿನ ನಿರ್ಧಾರ ಪ್ರಕಟಿಸಿದರು. 3ನೇ ದಿನಕ್ಕೆ ಧರಣಿ ಮುಂದುವರಿಯಿತು.


2015ರಲ್ಲಿ ಇಟಗಿ ಗ್ರಾಪಂನಿಂದ ಬೇರ್ಪಟ್ಟು ಹೊಸಳ್ಳಿ, ಕಳಕಾಪೂರ, ಜಿಗಳೂರ ಒಳಗೊಂಡಂತೆ ನೂತನವಾಗಿ ಹೊಸಳ್ಳಿ ಗ್ರಾಪಂ ನಿರ್ಮಾಣವಾಗಿತ್ತು, ಇದನ್ನು ವಿರೋಧಿಸಿ 2015, 2020ರ ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಿ ಹೋರಾಟ ಮಾಡಿದ್ದರು.

ಈ ವರ್ಷ ಮತ್ತೆ ಜಿಗಳೂರ ಗ್ರಾಮಸ್ಥರು ಮಂಗಳವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ನೂರಕ್ಕೂ ಹೆಚ್ಚು ಎತ್ತು, ಚಕ್ಕಡಿಗಳ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿ, ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net