

ಶಿಗ್ಗಾಂವಿ: ರೈತರ ಜಮೀನಿನಲ್ಲಿ ಬೋರ್ವೆಲ್ ಕೇಬಲ್ ಕದಿಯುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದು ಥಳಿಸಿದ ಘಟನೆ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗ್ರಾಮದ ಹೊರವಲಯದ ರೈತರ ಜಮೀನಿನಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳನೊಬ್ಬ ಹಾಡಹಗಲೇ ಬೋರ್ವೆಲ್ ಕೇಬಲ್ಗಳನ್ನು ಕುದಿಯುತ್ತಿದ್ದ, ಕೇಬಲ್ ಕಟ್ ಮಾಡಿಕೊಂಡು ಚೀಲ ತುಂಬಿಸಿಕೊಳ್ಳುವ ಸಮಯದಲ್ಲಿ ಅದೇ ಗ್ರಾಮದ ಕುರಿಕಾಯುವ ಯುವಕನೊಬ್ಬ ನೋಡಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾನೆ.
ಗ್ರಾಮಸ್ಥರು ತಕ್ಷಣ ಹೊಲಕ್ಕೆ ಬಂದು ಕೇಬಲ್ ಕಟ್ ಮಾಡುತ್ತಿದ್ದ ಕಳ್ಳನನ್ನು ಹಿಡಿದು ಥಳಿಸಿದ್ದಾರೆ. ನಂತರ ವಿಚಾರಣೆ ಮಾಡಿದಾಗ ಈತ ಹಾನಗಲ್ಲ ತಾಲೂಕಿನ ಕುಮಾರ್ ವರ್ದಿ ಎಂಬುದು ಗೊತ್ತಾಗಿದೆ. ಕಳ್ಳನನ್ನು ಬಂಕಾಪುರ ಪೊಲೀಸರಿಗೆ ಒಪ್ಪಿಸಿದ್ದು, ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.