ಹೊರಗಿನವರಿಗೆ ಪ್ರವೇಶ ನಿಷೇಧಿಸಿದ ಗ್ರಾಮಸ್ಥರು: ಕರೊನಾ ಸೋಂಕಿನ ಆತಂಕ ಕಾರಣ

yalanduru village 26 MAR 20
Published on

ಯಳಂದೂರು: ಕರೊನಾ ಸೋಂಕಿನ ಹರಡುವಿಕೆ ಎಲ್ಲರಲ್ಲೂ ಆತಂಕ ಸೃಷ್ಟಿಸಿದ್ದು, ಮುಂಜಾಗ್ರತಾ ಕ್ರಮಗಳನ್ನು ಎಲ್ಲರೂ ತೆಗೆದುಕೊಳ್ಳಬೇಕು ಎಂಬ ಜಾಗೃತಿ ಮೂಡಿಸುವ ಕೆಲಸವೂ ನಡೆಯುತ್ತಿದೆ. ಈ ನಡುವೆ, ಕೆಲವು ಗ್ರಾಮಗಳಲ್ಲಿ ಜನ ಭೀತರಾಗಿ ಹೊರಗಿನವರಿಗೆ ಗ್ರಾಮ ಪ್ರವೇಶವನ್ನು ನಿಷೇಧಿಸಿದ ಘಟನೆಗಳೂ ಅಲ್ಲಲ್ಲಿ ನಡೆದಿವೆ.

ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಕೃಷ್ಣಪುರ ಮತ್ತು ಯರಿಯುರಿಗೆ ಬೇರೆ ಊರಿನಿಂದ ಬರುವವರಿಗೆ ಗ್ರಾಮಸ್ಥರು ಪ್ರವೇಶ ನಿಷೇಧಿಸಿದ್ದಾರೆ. ಗ್ರಾಮದ ಹೆಬ್ಬಾಗಿಲಿನಲ್ಲಿ ತಡೆಯೊಡ್ಡಿ ಸ್ಥಳೀಯರಿಗೆ ಮಾತ್ರ ಗ್ರಾಮಸ್ಥರಿಗೆ ಪ್ರವೇಶ ನೀಡಲಾಗುವುದು. ಹೊರಗಿನಿಂದ ಬಂದವರಿಗೆ ಅವಕಾಶವಿಲ್ಲ ಎಂದು ಯರಿಯೂರಿನಲ್ಲಿ ನಾಮಫಲಕ‌ ಹಾಕಿ ಗ್ರಾಮಸ್ಥರು ಕಾವಲು ಕಾಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net