ಹೇರೂರ ಗ್ರಾಮದಲ್ಲಿ ನಾಲ್ಕೈದು ಮಂದಿಗೆ ಕಚ್ಚಿದ ಕಪ್ಪು ಮಂಗ : ಗ್ರಾಮಸ್ಥರಲ್ಲಿ ಆತಂಕ

ILK-27-4
ಇಳಕಲ್ಲ ಸಮೀಪದ ಹೇರೂರ ಗ್ರಾಮಸ್ಥರೊಬ್ಬರ ಕಾಲಿಗೆ ಕಪ್ಪು ಮಂಗ ಕಚ್ಚಿರುವುದು.
Published on

ಇಳಕಲ್ಲ: ಇಲ್ಲಿಯ ಸಮೀಪದ ಹೇರೂರ ಗ್ರಾಮದಲ್ಲಿ ಕಪ್ಪು ಮಂಗದ ಹಾವಳಿ ಹೆಚ್ಚಾಗಿದ್ದು, ದಿನಕ್ಕೆ 4-5 ಮಂದಿಗೆ ಕಡಿದು ಭಯದ ವಾತಾವರಣ ಮೂಡಿಸಿದೆ.

ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡವರಿಗೂ ಈ ಮಂಗ ಕಡಿಯುತ್ತಿದೆ. ಇದರಿಂದ ಹೇರೂರು ಗ್ರಾಮಸ್ಥರು ಭಯಭೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಅರಣ್ಯ ಅಧಿಕಾರಿಗಳು ಮಂಗನನ್ನು ಸೆರೆ ಹಿಡಿಯಲು ಬಂದಿದ್ದರಾದರೂ ಇನ್ನೂ ಕಾರ್ಯಾಚರಣೆ ಕೈಗೊಳ್ಳದ ಕಾರಣ ಮಂಗನ ಉಪಟಳ ಮುಂದುವರಿದಿದೆ. ಆದಷ್ಟು ಬೇಗ ಮಂಗನಿಂದ ಜನರನ್ನು ರಕ್ಷಿಸುವ ಕಾರ್ಯ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net