ಗ್ರಾಮೀಣರು ದೇಸಿ ಸಂಸತಿಯ ರಾಯಭಾರಿಗಳು

Villagers are the ambassadors of the Desi Parliament
ಮುದ್ದೇಬಿಹಾಳ ತಾಲೂಕಿನ ಬಳವಾಟದಲ್ಲಿ ಧರ್ಮಸಭೆಯಲ್ಲಿ ಕಾಂಗ್ರೆಸ್​ ಮುಖಂಡ ಸಿ.ಬಿ.ಅಸ್ಕಿ ಮಾತನಾಡಿದರು. ಚಂದ್ರಶೇಖರ ಶಿವಾಚಾರ್ಯರು, ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಗುರುಲಿಂಗ ಶಿವಾಚಾರ್ಯರು, ಡಾ.ಸೋಮಶೇಖರ ಶಿವಾಚಾರ್ಯರು, ಸಿದ್ದನಗೌಡ ಬಿರಾದಾರ ಇತರರಿದ್ದರು.
Published on

ಮುದ್ದೇಬಿಹಾಳ: ಗ್ರಾಮೀಣ ಜನರು ಸೌಹಾರ್ದ ಬಯಸುವಂಥವರು. ನಮ್ಮ ದೇಶದ ನಿಜವಾದ ಸಂಸತಿ ಇರುವುದು ಗ್ರಾಮೀಣ ಜನರಲ್ಲಿ. ಇವರೇ ನಮ್ಮ ಸಂಸತಿಯ ನಿಜವಾದ ರಾಯಭಾರಿಗಳಾಗಿದ್ದಾರೆ ಎಂದು ಕಾಂಗ್ರೆಸ್​ ಮುಖಂಡ, ಅಸ್ಕಿ ೌಂಡೇಷನ್​ ಅಧ್ಯ ಸಿ.ಬಿ.ಅಸ್ಕಿ ಹೇಳಿದರು.

ತಾಲೂಕಿನ ಬಳವಾಟ ಗ್ರಾಮದ ಕಂಠಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಹಿರೇಮಠ ಪರ್ವತಾಶ್ರಮದ ಸಹಯೋಗದಲ್ಲಿ ಡಾ.ಸೋಮಶೇಖರ ಶಿವಾಚಾರ್ಯರ ನೇತೃತ್ವದಲ್ಲಿ ಗುರುವಾರ ಏರ್ಪಡಿಸಿದ್ದ ಸದಾನಂದ ಶಿವಾಚಾರ್ಯರ 3ನೇ ಸ್ಮರಣೋತ್ಸವ, ಧರ್ಮಸಭೆ, 501 ಮುತೆದೆಯರಿಗೆ ಉಡಿ ತುಂಬುವುದು, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಶಕ್ತಿಯ ಸಂಕೇತವಾಗಿದ್ದು ಅವರನ್ನು ಗೌರವಿಸುವುದು ನಮ್ಮ ಸಂಸತಿಯ ಭಾಗವಾಗಿದೆ. ಲಿಂ.ಸದಾನಂದ ಶಿವಾಚಾರ್ಯರು ಈ ಭಾಗದಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಿದಂಥವರು. ಶ್ರೀಮಠದ ಡಾ.ಸೋಮಶೇಖರ ಶಿವಾಚಾರ್ಯರು ಅದನ್ನು ಮುಂದುವರಿಸಿಕೊಂಡು ಹೊರಟಿರುವುದು ಸ್ಮರಣೀಯ ಎಂದರು.

ಡಾ.ಸೋಮಶೇಖರ ಶಿವಾಚಾರ್ಯರು ನಡೆಸಿಕೊಟ್ಟ ಪ್ರವಚನ ಮಹಾಮಂಗಲಗೊಳಿಸಲಾಯಿತು. ರಾಜಕುಮಾರ ಯಾಳಗಿ, ಮಲ್ಲಯ್ಯ ಹಿರೇಮಠ ಸಂಗೀತ ಸೇವೆ ನೀಡಿದರು. ಕುಮಾರೇಶ್ವರ ಕೃಪಾಪೋಷಿತ ಪಂಡಿತ ಪಂಚಾರಿ ಗವಾಯಿಗಳ ನಾಟ್ಯ ಸಂದಿಂದ ಪಂಡಿತ ಶ್ರೀಕಂಠಶಾಸ್ತ್ರಿ ವಿರಚಿತ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಇದಕ್ಕೂ ಮುನ್ನ ಬುಧವಾರ ರಾತ್ರಿ 10 ರಿಂದ ಗುರುವಾರ ಬೆಳಗ್ಗೆ 9 ಗಂಟೆಯವರೆಗೂ ನಿರಂತರ ಶಿವಭಜನೆ ನಡೆದವು.

ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ತಡವಲಗಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು, ಡಾ.ಸೋಮಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಮಲ್ಲಯ್ಯ ಹಿರೇಮಠ, ಅರ್ಚಕ ಬಸಯ್ಯ ಕಂಠಿಮಠ, ಗುಡಿಹಾಳದ ಶ್ರೀಶೈಲ ಹಿರೇಮಠ, ತಾರನಾಳದ ಬಸಲಿಂಗಯ್ಯ ಹಿರೇಮಠ, ಸಮಾಜಸೇವಕ ಸಿದ್ದನಗೌಡ ಬಿರಾದಾರ ಇನ್ನಿತರರು ವೇದಿಕೆಯಲ್ಲಿದ್ದರು.

ಗ್ರಾಪಂ ಅಧ್ಯ ಬಸನಗೌಡ ಸಾಸನೂರ, ಭೂದಾನಿಗಳಾದ ಗೌರಮ್ಮಗೌಡಶ್ಯಾನಿ ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ಅಲ್ಲಮಪ್ರಭು ಪಾಟೀಲ, ಪ್ರಸಾದ ಸೇವೆಗೈದ ಇಂದ್ರಾಬಾಯಿ ಪಾಟೀಲ, ಬಸನಗೌಡ ಬಿರಾದಾರ, ವಿವೇಕಾನಂದ ಬಿರಾದಾರ, ಶಿವಸಂಗಪ್ಪಗೌಡ ಬಿರಾದಾರ, ಹಣಮಂತ ಭಜಂತ್ರಿ, ಯುವ ಕಾಂಗ್ರೆಸ್​ ಮುಖಂಡ ಬಸವರಾಜ ಭಜಂತ್ರಿ, ಕಾಳಪ್ಪ ಮಾದರ, ಹೂವಿನ ಸೇವೆಗೈದ ಸೋಮನಗೌಡ ಯಾಳವಾರ, ಮಲ್ಲಣ್ಣ ಪತ್ತಾರ, ಬಸಪ್ಪಗೌಡ ಕನಸಾಯಿ, ರಾಮನಗೌಡ ಕೊಂಡಗೂಳಿ, ಬಸನಗೌಡ ಢವಳಗಿ, ಸತ್ತೆಪ್ಪ ಹಿರೇಕುರುಬರ, ಜೋತೆಪ್ಪ ಹಿರೇಕುರುಬರ, ಸಿದ್ದಪ್ಪ ಡೊಳ್ಳಿ, ಬಸಪ್ಪ ಚಲವಾದಿ, ಮುದಕಪ್ಪ ಚಲವಾದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net