ಕೆಎಸ್ಸಾರ್ಟಿಸಿ ಬಸ್‌ಗಾಗಿ ಗ್ರಾಮಸ್ಥರಿಂದ ಮನವಿ

New Project (21)
Published on

ಕಡಬ: ಮಾಡಾವು ಅಂಕತಡ್ಕ ಮಂಜುನಾಥನಗರ ಮೂಲಕ ಪುತ್ತೂರು/ ಕಡಬ ಸಂಪರ್ಕಕ್ಕೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಪಾಲ್ತಾಡಿ ಗ್ರಾಮಸ್ಥರು ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅಮಲಿಂಗಯ್ಯ ಹೊಸಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಪಾಲ್ತಾಡಿ ಗ್ರಾಮದ ಮಂಜುನಾಥ ನಗರ ಎಂಬ ಭಾಗವು ಅಭಿವೃದ್ಧಿ ಹೊಂದುತ್ತಿದ್ದು, ಮುಂದುವರಿದ ಭಾಗವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಸಾರ್ವಜನಿಕರಿಗೆ ಸಂಚಾರಕ್ಕೆ ಬಸ್ ವ್ಯವಸ್ಥೆಗಾಗಿ ಸಂಬಂಧಪಟ್ಟ ಇಲಾಖೆೆಗೆ ಮನವಿ ನೀಡಲಾಯಿತು.

ಮಾಡಾವು - ಅಂಕತಡ್ಕ - ಬಂಬಿಲ - ಸವಣೂರು - ಪುತ್ತೂರು ಅಥವಾ ಕಡಬ ಹಾಗೂ ಪೆಲರ್ಂಪಾಡಿ - ಮಾಡಾವು - ಅಂಕತಡ್ಕ - ಬಂಬಿಲ - ಸವಣೂರು - ಪುತ್ತೂರು ಅಥವಾ ಕಡಬ ಮತ್ತು ಸವಣೂರು - ಬಂಬಿಲ - ಅಂಕತಡ್ಕ - ಮಾಡಾವು - ಪುತ್ತೂರು ರಸ್ತೆಯ ಮೂಲಕ ಬಸ್ ಸಂಚರಿಸುವಂತೆ ಮನವಿ ವಾಡಿದರು.

ಸವಣೂರು ಗ್ರಾಪಂ ಅಧ್ಯಕ್ಷೆ ಸುಂದರಿ ಬಿ.ಎಸ್., ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ., ಸವಣೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸತೀಶ್ ಅಂಗಡಿಮೂಲೆ, ಹರಿಕಲಾ ರೈ ಕುಂಜಾಡಿ, ವಿನೋದಾ ರೈ ಚೆನ್ನಾವರ, ಮಂಜುನಾಥನಗರ ಶ್ರೀ ಸಿದ್ಧಿವಿನಾಯಕ ಸೇವಾ ಸಂಘ ಅಧ್ಯಕ್ಷ ಪ್ರವೀಣ್ ಬಂಬಿಲ ದೋಳ, ವಿವೇಕಾನಂದ ಯುವಕ ಮಂಡಲ ಗೌರವಾಧ್ಯಕ್ಷ ಅನ್ನಪೂರ್ಣಾ ಪ್ರಸಾದ್ ರೈ ಬೈಲಾಡಿ, ಕಾರ್ಯದರ್ಶಿ ಸತ್ಯಪ್ರಕಾಶ್ ಶೆಟ್ಟಿ, ಸದಸ್ಯರಾದ ಸುರೇಶ್ ಬಂಬಿಲದೋಳ, ರಕ್ಷಿತ್ ಬಂಬಿಲ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net