ಕ್ರಿಕೆಟ್ ಕ್ಷೇತ್ರದಲ್ಲಿ ಅವಕಾಶ ಹೆಚ್ಚು

dj mlk sports
Published on

ಮೊಳಕಾಲ್ಮೂರು: ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡಾ ಚಟುವಟಿಕೆ ಅಗತ್ಯ ಎಂದು ತಹಸೀಲ್ದಾರ್ ಎಂ.ವಿ.ರೂಪಾ ಅಭಿಪ್ರಾಯಪಟ್ಟರು.

ಯಂಗ್ ಬಾಯ್ಸ ಕ್ರಿಕೆಟರ್ಸ್‌ ಬಳಗ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ 2 ದಿನದ ಕ್ರಿಕೆಟ್ ಪಂದಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಆಧುನಿಕ ಜಗತ್ತಿನಲ್ಲಿ ಹೆಚ್ಚು ಜನ ಮನ್ನಣೆ ಪಡೆದುಕೊಂಡಿರುವ ಕ್ರಿಕೆಟ್ ಯುವ ಪ್ರತಿಭೆಗಳಿಗೆ ಅತ್ಯುತ್ತಮ ವೇದಿಕೆ. ಹಳ್ಳಿ ಮಕ್ಕಳು ವಿಶ್ವಮಟ್ಟದಲ್ಲಿ ಸಾಧನೆ ಮಾಡಲು ಹೆಚ್ಚು ಅವಕಾಶ ಇದೆ.

ಜತೆಗೆ ವಿದ್ಯಾಭ್ಯಾಸದ ಕಡೆಯೂ ಗಮನ ನೀಡಬೇಕು ಎಂದು ತಿಳಿಸಿದರು.

ಪಪಂ ಮಾಜಿ ಅಧ್ಯಕ್ಷ ಗುರುರಾಜಣ್ಣ ಮಾತನಾಡಿ, ಬಾಲ್ಯದಲ್ಲೇ ಕ್ರೀಡಾ ಆಸಕ್ತಿ ಬೆಳಸಿಕೊಂಡರೆ ಆರೋಗ್ಯ ಜೀವನ ಸಾಧ್ಯವಾಗಲಿದೆ ಎಂದರು.

ಪಪಂ ಮುಖ್ಯಾಧಿಕಾರಿ ಈ.ಲೀಲಾವತಿ, ಸದಸ್ಯರಾದ ಎಸ್.ಖಾದರ್, ಅಬ್ದುಲ್ಲಾ, ಮುಖಂಡರಾದ ಬೇಡರಡ್ಡಿಹಳ್ಳಿ ಬಸವರಡ್ಡಿ, ಸಂಜೀವಮೂರ್ತಿ, ರವಿಕುಮಾರ, ಗೋಪಾಲ್, ಶಿವಲಿಂಗ, ನಾಗರಾಜ್, ಚಂದ್ರಣ್ಣ, ಪಂದ್ಯಾವಳಿ ಸಂಘಟಕರಾದ ರಘು, ಕಿರಣ್‌ಕುಮಾರ, ಮಹಮದ್, ಆಫ್ರೀದ್ ನವಾಜ್, ಯಾಸೀನ್ ಮಸಾಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net