15 ದಿನಕ್ಕೊಮ್ಮೆ ಗ್ರಾಮ ವಾಸ್ತವ್ಯ

RNR-DHANYAVADA
Published on

ರಾಣೆಬೆನ್ನೂರ: ರಾಜ್ಯದಲ್ಲಿ ಪಕ್ಷದ ವರಿಷ್ಠರು ಮತದಾರರಿಗೆ ಕೊಟ್ಟ ಮಾತಿನಂತೆ 5 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದಾರೆ. ನಿರುದ್ಯೋಗ ಮುಕ್ತ ರಾಣೆಬೆನ್ನೂರ ಹಾಗೂ ಬರ ಮುಕ್ತ ಹಾವೇರಿ ಜಿಲ್ಲೆ ಮಾಡುವ ಗ್ಯಾರಂಟಿಗಳನ್ನು ನಾನೂ ಈಡೇರಿಸುವೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.


ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಮತದಾರರಿಗೆ ಧನ್ಯವಾದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ 15 ದಿನಕ್ಕೊಮ್ಮೆ ಅವಶ್ಯವಿರುವ ಅಧಿಕಾರಿಗಳ ಜತೆ ಗ್ರಾಮ ವಾಸ್ತವ್ಯ ಮಾಡುತ್ತೇನೆ. ನನ್ನನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗದ ಬಡಜನರ ಮನೆಗೆ ಹೋಗಿ ಅವರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವತ್ತ ಶ್ರಮಿಸುತ್ತೇನೆ ಎಂದರು.


ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮಂಜನಗೌಡ ಪಾಟೀಲ, ಬಸನಗೌಡ ಮರದ, ರಾಮಣ್ಣ ನಾಯಕ, ಕೃಷ್ಣಪ್ಪ ಕಂಬಳಿ, ನಾಗರಾಜ ಕುಸಗೂರ, ಬಿ.ಬಿ. ನಂದ್ಯಾಲ, ಶೇಖಪ್ಪ ಬೇಡರ, ಸುಜಾತಾ ಬಾರ್ಕಿ, ಇರ್ಫಾನ ದಿಡಗೂರ, ಶೇರುಖಾನ ಕಾಬೂಲಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net