ಗ್ರಾಮದಲ್ಲೇ ಪಿಯೂ ಕಾಲೇಜು ಆರಂಭಿಸಿ

28 KAMPLI 05
ರಾಮಸಾಗರದ ಸರ್ಕಾರಿ ಪ್ರೌಢ ಶಾಲಾವರಣದಲ್ಲಿ ನಡೆದ ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಪಿಡಿಒ ಕೆ.ಹನುಮಂತಪ್ಪ ಮಾತನಾಡಿದರು. ಪ್ರಮುಖರಾದ ಎಂ.ಆಶಾ ತಿಪ್ಪೇಸ್ವಾಮಿ, ಎಚ್.ಸಿ.ರಾಘವೇಂದ್ರ, ಕರೆಂಟ್ ಗೋಪಾಲಪ್ಪ, ಮೌಲಸಾಬ್, ಅರುಣಾ ಇತರರಿದ್ದರು.
Published on

ಕಂಪ್ಲಿ: ತಾಲೂಕಿನ ರಾಮಸಾಗರದ ಸರ್ಕಾರಿ ಪ್ರೌಢಶಾಲಾವರಣದಲ್ಲಿ ಬುಧವಾರ ಗ್ರಾಪಂ.ಅಧ್ಯಕ್ಷೆ ಎಂ.ಆಶಾ ತಿಪ್ಪೇಸ್ವಾಮಿ ಅಧ್ಯಕ್ಷತೆಯಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ಜರುಗಿತು.

ಕಿಡಿಗೇಡಿಗಳು ರಾತ್ರಿ ಶಾಲಾವರಣದಲ್ಲಿ ಮದ್ಯ ಸೇವಿಸಿ ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ನಂತರ ಬಾಲಕಿಯರನ್ನು ಉನ್ನತ ಶಿಕ್ಷಣಕ್ಕಾಗಿ ಬೇರೆಡೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿರುವ ಕಾರಣ ಗ್ರಾಮದಲ್ಲಿಯೇ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭಿಸುವ ಕುರಿತು ಹಾಗೂ ನಾನಾ ಸಮಸ್ಯೆಗಳನ್ನು ವಿದ್ಯಾರ್ಥಿಗಳಾದ ಧರಣಿ, ಜ್ಯೋತಿ, ಮೋಹನ್ ಕುಮಾರ್ ಸಭೆಯಲ್ಲಿ ಅಳಲು ತೋಡಿಕೊಂಡರು.

ಪಿಡಿಒ ಕೆ.ಹನುಮಂತಪ್ಪ, ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸದಸ್ಯ ಎಚ್.ಸಿ.ರಾಘವೇಂದ್ರ, ಮುಖಂಡ ಕರೆಂಟ್ ಗೋಪಾಲಪ್ಪ, ಗ್ರಾಪಂ ಸದಸ್ಯ ಮೌಲಾಸಾಬ್, ಕಾರ್ಯದರ್ಶಿ ನಾಗರಾಜ, ಎಸ್‌ಡಿಎಂಸಿ ಅಧ್ಯಕ್ಷ ಕರಿಬಸಯ್ಯಸ್ವಾಮಿ, ಮುಖ್ಯಶಿಕ್ಷಕಿ ಅರುಣಾ, ಡಾ.ಅರುಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net