ಬಾಲ್ಯ ವಿವಾಹ ನಿರ್ಮೂಲನೆಗೆ ಸಹಕರಿಸಿ

UDGHATANE
ಯಲಬುರ್ಗಾ ತಾಲೂಕಿನ ತೊಂಡಿಹಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ಗ್ರಾಪಂ ಅಧ್ಯಕ್ಷ ಕಲ್ಲಿನಾಥ ಲಿಂಗಣ್ಣವರ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಲಕ್ಷ್ಮವ್ವ ಪರಸಪ್ಪ ಲಮಾಣಿ, ಸದಸ್ಯೆ ಗೀತಾ ತುಪ್ಪದ, ಪಿಡಿಒ ಕೆ.ಬಸವರಾಜ, ಅಂಗನವಾಡಿ ವಲಯ ಮೇಲ್ವಿಚಾರಕಿ ಚನ್ನಮ್ಮ ಇದ್ದರು.
Published on

ಯಲಬುರ್ಗಾ: ಪ್ರತಿಯೊಬ್ಬರೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಕೈಜೋಡಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಕಲ್ಲಿನಾಥ ಲಿಂಗಣ್ಣವರ್ ಹೇಳಿದರು.

ತಾಲೂಕಿನ ಕರಮುಡಿ ಗ್ರಾಪಂನಿಂದ ತೊಂಡಿಹಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಹಕ್ಕು, ಸಮಸ್ಯೆಯನ್ನು ಮುಕ್ತವಾಗಿ ಕೇಳುವ ವಾತಾವರಣ ಸೃಷ್ಟಿಯಾಗಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಹಕರಿಸಬೇಕು ಎಂದರು.

ತಾಪಂ ಸಂಪನ್ಮೂಲ ವ್ಯಕ್ತಿ ಭೀಮಪ್ಪ ಹವಳಿ, ಗ್ರಾಪಂ ಸದಸ್ಯರಾದ ಕಾಳಪ್ಪ ಬಡಿಗೇರ, ನಿಂಗನಗೌಡ ಹೊಸಹಳ್ಳಿ, ದೇವಪ್ಪ ವಡ್ಡರ, ಗಾಳೇಪ್ಪ ದೊಡ್ಡಮನಿ, ಮರ್ದಾನ್‌ಸಾಬ್ ಮುಲ್ಲಾ, ರಮೇಶ ವಡ್ಡರ, ಕರಮುಡಿ ಎಸ್ಡಿಎಂಸಿ ಅಧ್ಯಕ್ಷ ಗೌಡಪ್ಪ ಬಲಕುಂದಿ, ಪ್ರಮುಖರಾದ ಶೇಖರಗೌಡ ಮಾಲಿಪಾಟೀಲ್, ಮಲ್ಲಿಕಾರ್ಜುನ ಗೌಡ ಪಾಟೀಲ್, ಯಮನೂರಪ್ಪ, ಶ್ರೀಶೈಲಪ್ಪ ಅಂಗಡಿ, ಅಮರೇಶ ಲಾಟಿ, ಬಸವರಾಜ ಕರಾಟೆ, ಆನಂದ ಕೇರಳ್ಳಿ, ಮಂಜುಳಾ, ಶೋಭಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net