ಕುಡಿವ ನೀರಿನ ಸಮಸ್ಯೆ ಇತ್ಯರ್ಥಪಡಿಸಿ

Kavital meeting
Published on

ಕವಿತಾಳ: ಪಾಮನಕಲ್ಲೂರು ಗ್ರಾಪಂ ವ್ಯಾಪ್ತಿಯ ಊರುಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು ಎಂದು ಸಿಬ್ಬಂದಿಗೆ ಗ್ರಾಪಂ ಅಧ್ಯಕ್ಷ ರಾಜಸಾಬ್ ಸೈಕಲ್ ಸೂಚಿಸಿದರು.

ಗ್ರಾಪಂ ಕಚೇರಿಯಲ್ಲಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು. ಪಾಮನಕಲ್ಲೂರು, ಬೆಂಚಮರಡಿ, ಆನಂದಗಲ್‌ನಲ್ಲಿ ನೀರಿಗಾಗಿ ಜನರು ತೊಂದರೆ ಪಡುತ್ತಿದ್ದಾರೆ. ಇರಕಲ್ ಕೆರೆಯ ನೀರು ಸಮರ್ಪಕವಾಗಿ ಬರುತ್ತಿಲ್ಲ. ಈ ಕುರಿತ ಸಮಸ್ಯೆಯನ್ನು ನಿವಾರಿಸಬೇಕು ಎಂದರು.

ಪಿಡಿಒ ರಾಮಣ್ಣ ನಡಗೇರ ಮಾತನಾಡಿ, ಫೆ.16ರಂದು ಸಂವಿಧಾನ ಜಾಗೃತಿ ಜಾಥಾ ಪಾಮನಕಲ್ಲೂರಿಗೆ ಬರುತ್ತಿದ್ದು, ಅಂದು ಸರ್ಕಾರಿ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಬರಮಾಡಿಕೊಳ್ಳಬೇಕು. ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ನೇರವಾಗಿ ಪಂಚಾಯಿತಿ ಕಚೇರಿಗೆ ಬಂದು ಪರಿಹರಿಸಿಕೊಳ್ಳಬೇಕು. ಗ್ರಾಪಂ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಚೇರಿಯಲ್ಲಿ ಇರಬೇಕು ಎಂದರು.

ಉಪಾಧ್ಯಕ್ಷೆ ತಿಮ್ಮಮ್ಮ ಭೋವಿ, ಸದಸ್ಯರಾದ ವೆಂಕಟರಡ್ಡಿ, ಶರಣಪ್ಪ ಆನಂದಗಲ್, ಶ್ರೀನಿವಾಸ, ದುರುಗಪ್ಪ ಕಲ್ಲೂರು, ಬಸವರಾಜ, ಲಕ್ಷ್ಮಣ ನಾಯಕ, ಅಂಬಮ್ಮ, ಖಾಜಮ್ಮ, ರೇಣುಕಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net