ಯೂಕ್ರೇನ್​ನಲ್ಲಿ ಸಾವಿಗೀಡಾದ ನವೀನ್​; ಪಾರ್ಥಿವ ಶರೀರಕ್ಕಾಗಿ ಗ್ರಾಮಸ್ಥರಿಂದ ಸಹಿ ಸಂಗ್ರಹ

1245688
Published on

ಹಾವೇರಿ: ಯೂಕ್ರೇನ್​ನಲ್ಲಿ ರಷ್ಯಾದ ಕ್ಷಿಪಣಿ ದಾಳಿಗೆ ಬಲಿಯಾದ ಕನ್ನಡಿಗ ನವೀನ್​ ಶೇಖರಪ್ಪ ಗ್ಯಾನಗೌಡರ್ ಅವರ ಪಾರ್ಥಿವ ಶರೀರಕ್ಕಾಗಿ ಆತನ ಪಾಲಕರು ಈಗಾಗಲೇ ಸರ್ಕಾರವನ್ನು ಒತ್ತಾಯಿಸಿದ್ದು, ಇದೀಗ ಅಲ್ಲಿನ ಗ್ರಾಮಸ್ಥರು ಕೂಡ ಅದಕ್ಕೆ ದನಿಯಾಗಿದ್ದಾರೆ.

ನವೀನ್ ಮೃತಪಟ್ಟು ಐದು ದಿನಗಳು ಕಳೆದರೂ ಪಾರ್ಥಿವ ಶರೀರ ತಾಯ್ನಾಡಿಗೆ ತರದ್ದರಿಂದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮಸ್ಥರು, ಸಹಿ ಸಂಗ್ರಹ ನಡೆಸುತ್ತಿದ್ದಾರೆ. ಆ ಮೂಲಕ ಸರ್ಕಾರದ ಮೇಲೆ ಒತ್ತಡು ಹೇರಲು ಪ್ರಯತ್ನಿಸುತ್ತಿದ್ದಾರೆ.

ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವೀನ್ ಮನೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಈ ಕಾರ್ಯಕ್ಕೆ ಮುಂದಾಗಿದ್ದು, ಗ್ರಾಮಸ್ಥರ ಸಹಿ ಇರುವ ಪತ್ರ ಸಿಎಂ ಅವರಿಗೆ ಸಲ್ಲಿಸಿ, ತಮ್ಮ ಕಡೆಯಿಂದಲೂ ಒತ್ತಾಯಿಸುವ ಸಲುವಾಗಿ ಈ ಪ್ರಯತ್ನ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net