

ಮುಗಳಿಹಾಳ: ಗ್ರಾಮಕ್ಕೆ ತಾಪಂ ಇಒ ಆನಂದ ಬಡಕುಂದ್ರಿ ಭೇಟಿ ನೀಡಿ ಗ್ರಾಮ ಪಂಚಾಯಿತಿ ಕಟ್ಟಡ ಕಾಮಗಾರಿಯನ್ನು ಶನಿವಾರ ವೀಸಿದರು. ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ 20 ಲ ರೂ., ಗ್ರಾಮ ವಿಕಾಸ ಯೋಜನೆಯಡಿ 31.50 ಲ ರೂ. ಹಾಗೂ 15ನೇ ಹಣಕಾಸು ಯೋಜನೆಯಡಿ 10 ಲ ರೂ. ಅನುದಾನ ಮೀಸಲೀಡಲಾಗಿದೆ ಎಂದು ಪಿಡಿಒ ಅಮೀತ್ ನಾಯ್ಕ ಮಾಹಿತಿ ನೀಡಿದರು. ಅಂದಾಜು 61.50 ಲ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಗ್ರಾಮ ಪಂಚಾಯಿತಿ ಕಟ್ಟಡ ಸುಸಜ್ಜಿತವಾಗಿ ನಿರ್ಮಿಸಬೇಕು. ತಾಲೂಕಿನಲ್ಲಿಯೇ ಮಾದರಿ ಕಟ್ಟವಾಗಲಿ ಎಂದು ತಾಪಂ ಇಒ ಆನಂದ ಬಡಕುಂದ್ರಿ ತಿಳಿಸಿದರು. ಜಿಪಂ ಎಇಇ ಎಚ್.ಎ.ಕದ್ರಾಪುರ, ನರೇಗಾ ಸಹಾಯಕ ನಿರ್ದೇಶಕ ಆರ್.ಬಿ.ರಕ್ಕಸಗಿ, ಕಾರ್ಯದರ್ಶಿ ಕೆ.ವೈ.ದೊಡ್ಡನ್ನವರ, ಈರಣ್ಣ ಕುಂಬಾರ, ಮಹಾದೇವ ಕಾಮಣ್ಣನವರ, ಮಂಜುನಾಥ ದಳವಾಯಿ, ರಮೇಶ ತಳವಾರ, ಆನಂದ ಪವಾಡಿ ಇತರರಿದ್ದರು.