

ಕಾಸರಗೋಡು: ಜಾಗದ ಸ್ಕೆಚ್ ನೀಡಲು 1 ಸಾವಿರ ರೂ. ಲಂಚ ಪಡೆದ ಗ್ರಾಮಾಧಿಕಾರಿಗೆ ತಲಶ್ಯೇರಿಯ ವಿಜಿಲೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ರಾಮಕೃಷ್ಣನ್ 2 ವರ್ಷ ಜೈಲು ಶಿಕ್ಷೆ ಮತ್ತು 40 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಅಪರಾಧಿ ಆರು ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವಂತೆ ಸೂಚಿಸಲಾಗಿದೆ. ಆದೂರು ಗ್ರಾಮಾಧಿಕಾರಿಯಾಗಿದ್ದ ಕೆ.ಅನಿಲ್‌ಕುಮಾರ್(47) ಶಿಕ್ಷೆಗೀಡಾದ ಅಧಿಕಾರಿ. ಉಮ್ಮರ್‌ಫಾರೂಕ್ ಎಂಬುವರು ಜಾಗದ ಸ್ಕೆಚ್‌ಗಾಗಿ 2013ರಲ್ಲಿ ಅರ್ಜಿ ಸಲ್ಲಿಸಿದ್ದು, ಸ್ಕೆಚ್ ನೀಡಲು ಒಂದೂವರೆ ಸಾವಿರ ರೂ. ಬೇಡಿಕೆಯಿರಿಸಿ ಪಡೆದುಕೊಂಡಿರುವ ಬಗ್ಗೆ ವಿಜಿಲೆನ್ಸ್‌ನ ಅಂದಿನ ಡಿವೈಎಸ್‌ಪಿ ಕೆ.ದಾಮೋದರನ್ ಕೇಸ್ ದಾಖಲಿಸಿಕೊಂಡಿದ್ದರು.