ಗ್ರಾಪಂ ಸದಸ್ಯನ ಮನೆ ಗೋಡೆ ಕುಸಿತ

17mdka2
ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರನಗರ ನಿವಾಸಿ ಕೆ.ಬಿ. ಶಂಶುದ್ದೀನ್ ಮನೆ ಗೋಡೆ ಬುಧವಾರ ಮುಂಜಾನೆ ಕುಸಿದು ಹಾನಿಗೀಡಾಗಿದೆ.
Published on

ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರನಗರ ನಿವಾಸಿ ಕೂಡುಮಂಗಳೂರು ಗ್ರಾಪಂ ಸದಸ್ಯ ಕೆ.ಬಿ. ಶಂಶುದ್ದೀನ್ ಎಂಬುವರ ಮನೆ ಗೋಡೆ ಕುಸಿದು ಹಾನಿ ಉಂಟಾಗಿದೆ.

ಬುಧವಾರ ಮುಂಜಾನೆ ಗೋಡೆ ಕುಸಿದಿದ್ದು, ಮನೆಯಲ್ಲಿ ಏಕಾಂಗಿಯಾಗಿ ಮಲಗಿದ್ದ ಶಂಶುದ್ದೀನ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮುಂಜಾನೆ 3.40ರ ಹೊತ್ತಿಗೆ ಮನೆ ಮುಂಭಾಗದ ಗೋಡೆ ಕುಸಿದು ಹೊರಗೆ ನಿಲ್ಲಿಸಿದ್ದ ಮೋಟಾರ್ ಬೈಕ್ ಮೇಲೆ ಬಿದ್ದಿದೆ. ಈ ವೇಳೆ ಎಚ್ಚರಗೊಂಡ ಶುಂಶುದ್ದೀನ್, ಹೊರಗೆ ಧಾವಿಸಿ ಗಮನಿಸುವಷ್ಟರಲ್ಲಿ, ಉಳಿದರ್ಧ ಗೋಡೆ ಬೆಡ್ ಮೇಲೆ ಕುಸಿದುಬಿದ್ದಿದೆ. ಶಂಶುದ್ದೀನ್ ಬೆಡ್‌ನಿಂದ ತಕ್ಷಣ ಎದ್ದ ಹಿನ್ನೆಲೆಯಲ್ಲಿ ಭಾರಿ ಅಪಾಯ ತಪ್ಪಿದಂತಾಗಿದೆ.


ಕುಶಾಲನಗರ ತಹಸೀಲ್ದಾರ್ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ತಲಾ 10 ಸಾವಿರ ರೂ. ಮತ್ತು ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ 5 ಸಾವಿರ ರೂ. ತಕ್ಷಣದ ಪರಿಹಾರ ನೀಡಿದೆ.


ಕುಶಾಲನಗರದ ಪತ್ರಕರ್ತರಾಗಿರುವ ಶಂಶುದ್ದೀನ್ ಕೂಡ ಆಗಿದ್ದಾರೆ. ಪಂಚಾಯಿತಿ ಪ್ರತಿನಿಧಿಯ ಮನೆ ಕುಸಿದು ಅನಾಹುತವಾಗಿದ್ದರೂ, ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷರು ಸೇರಿದಂತೆ ಸದಸ್ಯರು, ಅಧಿಕಾರಿಗಳು ಭೇಟಿ ನೀಡದೆ ಅಸಡ್ಡೆ ತೋರಿದ್ದಾರೆ.


ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ಉಪಾಧ್ಯಕ್ಷ ನಾಗರಾಜ ಶೆಟ್ಟಿ, ಖಜಾಂಚಿ ಕುಡೆಕಲ್ ಗಣೇಶ್, ನಿರ್ದೇಶಕರಾದ ಶಿವರಾಜ್, ಮುಸ್ತಾಫ, ವಿನೋದ್, ಜಯಪ್ರಕಾಶ್, ಜಿಲ್ಲಾ ಸಂಘದ ಖಜಾಂಚಿ ಆನಂದ್ ಕೊಡಗು, ನಿರ್ದೇಶಕರಾದ ರಘು ಹೆಬ್ಬಾಲೆ, ಟಿ.ಆರ್. ಪ್ರಭುದೇವ್, ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಮತ್ತಿತರರು ಭೇಟಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net