ಸಾಲಕ್ಕೆ ಹೆದರಿ ಗ್ರಾಪಂ ಸದಸ್ಯ ಆತ್ಮಹತ್ಯೆ

13blrp2-sunil
ಮೃತ ಸುನೀಲ್
Published on

ಬೇಲೂರು : ತಾಲೂಕಿನ ಅರೇಹಳ್ಳಿ ವ್ಯಾಪ್ತಿಯ ಕುಂಬಾರಹಳ್ಳಿಯಲ್ಲಿ ಸಾಲಬಾಧೆಯಿಂದ ಗ್ರಾಮ ಪಂಚಾಯಿತಿ ಸದಸ್ಯ ಬುಧವಾರ ಆತ್ಮಹತ್ಯೆ ಶರಣಾಗಿದ್ದಾರೆ.
ಚೀಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸುನೀಲ್(38) ಮೃತ. ಅವಿವಾಹಿತರಾಗಿರುವ ಸುನೀಲ್ ಕೂಲಿ ಕೆಲಸ ಮಾಡಿಕೊಂಡಿದ್ದರು. ಹಾಲಿ ಗ್ರಾಪಂ ಸದಸ್ಯರೂ ಆಗಿದ್ದರು. ನಾಲ್ಕೈದು ವರ್ಷದಿಂದ ಕೋಳಿ ಸಾಕಣೆ ಮಾಡುತ್ತಿದ್ದರು. ಇದಕ್ಕಾಗಿ ವಿವಿಧ ಸಂಘ ಹಾಗೂ ಸೊಸೈಟಿಗಳಲ್ಲಿ ಹಾಗೂ ಕೆಲವರಿಂದ ಕೈ ಸಾಲ ಮಾಡಿದ್ದರು. ಆದರೆ ಕೋಳಿ ಸಾಕಣೆೆಯಿಂದ ಸಾಕಷ್ಟು ನಷ್ಟ ಅನುಭವಿಸಿದ್ದ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೆ ಮನನೊಂದಿದ್ದರು. ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಅಟ್ಟದ ಮೇಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಅರೇಹಳ್ಳಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಅಂತ್ಯಕ್ರಿಯೆಯನ್ನು ಸ್ವಗ್ರಾಮದಲ್ಲಿ ಬುಧವಾರ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net