ಹಳ್ಳಿಗಳಲ್ಲಿ ಜೀವಂತವಾಗಿದೆ ಜನಪದ ಕಲೆ

22,KHH-2P
ಕೆಂಚಮಲ್ಲನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕೊಲ್ಲಾರಾಂಬಿಕಾ ಮಹಿಳಾ ಸಾಂಸ್ಕೃತಿಕ ಸೇವಾ ಟ್ರಸ್ಟ್ ಉದ್ಘಾಟನೆ ಹಾಗೂ ಗ್ರಾಮೀಣ ಮಹಿಳಾ ಜನಪದ ಸಂಭ್ರಮ ಕಾರ್ಯಕ್ರಮದಲ್ಲಿ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ರಾ.ವೀರೇಶ್ ಪ್ರಸಾದ್ ಮಾತನಾಡಿದರು. ಒಕ್ಕೂಟದ ಜಿಲ್ಲಾಧ್ಯಕ್ಷೆ ಗಾಯಿತ್ರಿ ಮೃತ್ಯುಂಜಯ, ಗ್ರಾಪಂ ಸದಸ್ಯ ವೈ.ಪೆನ್ನಪ್ಪ, ಡಾ.ವೈ.ಫಕೀರಪ್ಪ, ಗ್ರಾಪಂ ಅಧ್ಯಕ್ಷೆ ಉಮಾದೇವಿ, ಪಿಡಿಒ ವಿನಯ್‌ಕುಮಾರ್ ಇದ್ದರು.
Published on

ಕಾನಹೊಸಹಳ್ಳಿ: ಹಳ್ಳಿಗಳಲ್ಲಿ ಭಜನೆ, ಸೋಬಾನೆ, ಚೌಡ್ಕಿ ಸೇರಿದಂತೆ ನಾನಾ ಜನಪದ ಕಲೆಗಳು ಜೀವಂತವಾಗಿದ್ದು, ಅಂಥ ಕಲೆಗಳನ್ನು ಪೋಷಿಸಿಕೊಂಡು ಬಂದಿರುವ ಜನಪದ ಕಲಾವಿದರಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಸಾಂಸ್ಕೃತಿಕ ಸಂಘಟನೆಗಳ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ರಾ.ವೀರೇಶ್ ಪ್ರಸಾದ್ ತಿಳಿಸಿದರು.

ಕೆಂಚಮಲ್ಲನಹಳ್ಳಿಯ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಆಯೋಜಿಸಿದ್ದ ಕೊಲ್ಲಾರಾಂಬಿಕಾ ಮಹಿಳಾ ಸಾಂಸ್ಕೃತಿಕ ಸೇವಾ ಟ್ರಸ್ಟ್ ಉದ್ಘಾಟನೆ ಹಾಗೂ ಗ್ರಾಮೀಣ ಮಹಿಳಾ ಜನಪದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಂಚಮಲ್ಲನಹಳ್ಳಿ ಗ್ರಾಮದಲ್ಲಿ ಸೋಬಾನೆ ಹಾಡುವ ಸಾಕಷ್ಟು ಮಹಿಳೆಯರಿದ್ದು, ಅವರಿಗೆ ಕನ್ನಡ ಮತ್ತು ಸಂಸ್ಕೃತ ಇಲಾಖೆಯಿಂದ ಮಾಸಿಕ ಕಾರ್ಯಕ್ರಮ ನೀಡುವ ಮೂಲಕ ಜನಪದ ಕಲೆ ಉಳಿಸಿ, ಬೆಳೆಸಬೇಕಾಗಿದೆ ಎಂದರು.

ಒಕ್ಕೂಟದ ಜಿಲ್ಲಾಧ್ಯಕ್ಷೆ ಗಾಯಿತ್ರಿ ಮೃತ್ಯುಂಜಯ, ಗ್ರಾಪಂ ಸದಸ್ಯ ವೈ.ಪೆನ್ನಪ್ಪ, ಡಾ.ವೈ.ಫಕೀರಪ್ಪ, ಆಲೂರು ಗ್ರಾಪಂ ಅಧ್ಯಕ್ಷೆ ಉಮಾದೇವಿ ಅಂಜಿನಪ್ಪ, ಕೊಲ್ಲಾರಾಂಬಿಕಾ ಮಹಿಳಾ ಸಾಂಸ್ಕೃತಿಕ ಸೇವಾ ಟ್ರಸ್ಟ್ ಅಧ್ಯಕ್ಷೆ ಶಾಂತಮ್ಮ ತಿಪ್ಪೇಸ್ವಾಮಿ, ಪಿಡಿಒ ವಿನಯ್‌ಕುಮಾರ್, ಸೇವಾ ಟ್ರಸ್ಟ್ ಕಾರ್ಯದರ್ಶಿ ಚನ್ನಮ್ಮ, ಮುಖಂಡರಾದ ಎನ್.ಟಿ.ಸುರೇಶ್, ಎಂ.ಬಸವರಾಜ, ಪ್ರಸನ್ನಸ್ವಾಮಿ, ಕೆ.ಬಿ.ಓಬಳೇಶ್, ಜಿ.ಟಿ.ಪೆರಮಯ್ಯ,

ಸುಮಾ, ರುದ್ರಮ್ಮ, ಭಾರತಿ, ಸದಸ್ಯರಾದ ಕುರಿಹಟ್ಟಿ ಶಿವಮ್ಮ, ಕೊಲ್ಲಮ್ಮ, ಎಂ.ಆರ್.ತಿಪ್ಪಮ್ಮ, ರತ್ನಮ್ಮ, ಎನ್.ಕೊಲ್ಲಮ್ಮ, ಚೌಡಮ್ಮ, ಜಯಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಬಸಮ್ಮ, ಅನಸೂಯಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net