

ಹಗರಿಬೊಮ್ಮನಹಳ್ಳಿ: ತಾಲೂಕಿನ ಕಿತ್ನೂರು ಗ್ರಾಮದಲ್ಲಿ ಶುಕ್ರವಾರ ಗ್ರಾಮಠಾಣಾ ಜಮೀನುಗಳ ಒತ್ತುವರಿ ತೆರವುಗೊಳಿಸಲಾಯಿತು.
ತಹಸೀಲ್ದಾರ್ ಚಂದ್ರಶೇಖರ ಶಂಬಣ್ಣ ಗಾಳಿ ಮಾತನಾಡಿ, ಕಳೆದ ತಿಂಗಳು 29ರಂದು ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಒತ್ತುವರಿ ತೆರವಿಗೆ ಡಿಸಿ ಸೂಚಿಸಿದ್ದರು. ಹೀಗಾಗಿ ಗ್ರಾಮದ ಸರ್ವೇ ನಂ. 393/ಎ3ಎ ವಿ:15.04, 393/ಎ3ಸಿ ವಿ:12.29 ಒಟ್ಟು ವಿಸ್ತೀರ್ಣ 27.33 ಎಕರೆ ಗ್ರಾಮಠಾಣಾ ಜಮೀನುಗಳು ಒತ್ತುವರಿಯಾಗಿದ್ದು, ಅಳತೆ ಮಾಡಿ ತೆರವುಗೊಳಿಸಿ ಸಸಿಗಳನ್ನು ನೆಡಲಾಗುತ್ತಿದೆ. ತಾಲೂಕಿನಾದ್ಯಂತ ಸರ್ಕಾರಿ ಭೂಮಿಯ ಒತ್ತುವರಿಯನ್ನು ಹಂತ ಹಂತವಾಗಿ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ತಂಬ್ರಹಳ್ಳಿ ಠಾಣೆ ಪಿಎಸ್‌ಐ ಸುವಾರ್ತ, ಕಂದಾಯ ಅಧಿಕಾರಿ ಸಾಲಮನಿ ಕೊಟ್ರೇಶ್, ಗ್ರಾಮಲೆಕ್ಕಿಗ ಮೇಘರಾಜ, ಸರ್ವೇ ಅಧಿಕಾರಿ ಶ್ರೀಧರನಾಯ್ಕ, ಪಿಡಿಒ ರೇವಣಸಿದ್ದಪ್ಪ, ಗ್ರಾಮಸ್ಥರಾದ ಗುದ್ಲಿ ಹನುಮಂತಪ್ಪ, ಎ.ಕೊಟ್ರಪ್ಪ, ಬೆಂಕಿ ಮಲ್ಲಪ್ಪ, ಎಚ್.ಡಿ.ಮೈಲಾರಪ್ಪ, ಉತ್ತಂಗಿ ವೀರಭದ್ರಪ್ಪ, ಶಂಬನಗೌಡ, ಮದ್ದಾನಸ್ವಾಮಿ, ಪಿ.ಉಮ್ಮಣ್ಣ, ಪಿ.ಸೋಮಪ್ಪ, ಡಿ.ನಿಂಗಪ್ಪ, ಭರಮರೆಡ್ಡಿ ಇತರರಿದ್ದರು.