ಗ್ರಾಮ ಸಹಾಯಕರ ಬೇಡಿಕೆ ಈಡೇರಿಸಲಿ

web2
ಹಿರೇಬಾಗೇವಾಡಿಯಿಂದ ಸುವರ್ಣ ಸೌಧದತ್ತ ಮಂಗಳವಾರ ಗ್ರಾಮ ಸಹಾಯಕರು ಪಾದಯಾತ್ರೆ ಬೆಳಸಿದರು. ಶಿವಮೂರ್ತಿ ಸ್ವಾಮೀಜಿ, ಕಲ್ಲಯ್ಯಸ್ವಾಮಿ ಉದೇಶಿಮಠ, ಪಾವಗಡ ಶ್ರೀರಾಮ, ಮಹಾದೇವಪ್ಪ ಇಂಗಳಗಿ ಇತರರಿದ್ದರು.
Published on

ಹಿರೇಬಾಗೇವಾಡಿ: ಕಂದಾಯ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರನ್ನು ಡಿ ದರ್ಜೆಗೆ ಸೇರಿಸಿ ಸೇವಾ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ಮಂಗಳವಾರ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿಗೆ ಗೌರವ ಸಲ್ಲಿಸಿ ಸುವರ್ಣ ಸೌಧದತ್ತ ಪಾದಯಾತ್ರೆ ಬೆಳೆಸಿದರು.

ಅರಳೀಕಟ್ಟಿ ತೋಂಟೇಶ್ವರ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ ಮಾತನಾಡಿ, ಗ್ರಾಮ ಸಹಾಯಕರ ಡಿ ದರ್ಜೆ ಬೇಡಿಕೆ ಈಡೇರಿಸುವ ಮೂಲಕ ಸರ್ಕಾರಿ ಸವಲತ್ತುಗಳನ್ನು ನೀಡಬೇಕು ಎಂದರು. ಗ್ರಾಮ ಸಹಾಯಕರ ಸಂಘದ ಕಾನೂನು ಸಲಹೆಗಾರ ಪಾವಗಡ ಶ್ರೀರಾಮ ಮಾತನಾಡಿದರು. ಕಲ್ಲಯ್ಯಸ್ವಾಮಿ ಉದೇಶಿಮಠ, ರಾಜ್ಯಾಧ್ಯಕ್ಷ ಮಡಿವಾಳಪ್ಪ ವಣ್ಣೂರ, ಬೆಳಗಾವಿ ಜಿಲ್ಲಾಧ್ಯಕ್ಷ ಮಹಾದೇವಪ್ಪ ಇಂಗಳಗಿ, ನಿಂಗಪ್ಪ ರೊಟ್ಟಿ, ನಾಗನಗೌಡ ಪಾಟೀಲ, ಸುನೀಲ ಕೋಲಕಾರ, ಕಲ್ಲಪ್ಪ ಹೆಗರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net