

ಬೈಲಹೊಂಗಲ: ಸಮೀಪದ ಹಿಟ್ಟಣಗಿ ಗ್ರಾಮದ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಪ್ರಾರಂಭಗೊಂಡಿದ್ದು, ಮುನವಳ್ಳಿಯ ಸೋಮಶೇಖರ ಮಠದ ಮುರುಂದ್ರ ಸ್ವಾಮೀಜಿ, ಏಣಗಿಯ ಬಂಗಾರ ಅಜ್ಜನ ಮಠದ ವಿರೂಪಾ ಸ್ವಾಮೀಜಿ ನೇತೃತ್ವದಲ್ಲಿ ಜೂ. 12ರ ವರೆಗೆ ಜರುಗಲಿದೆ.
ಜಾತ್ರೆ ಅಂಗವಾಗಿ ದಿನಾಲೂ ಪೂಜಾ ಕೈಂಕರ್ಯ ಜರುಗುತ್ತಿವೆ. ಪ್ರತಿದಿನ ದೇವಿಯರ ಪಲ್ಲಕ್ಕಿ ಉತ್ಸವ ಗ್ರಾಮದೆಲ್ಲೆಡೆ ಸಂಚರಿಸುತ್ತಿದೆ. 10ರಂದು ಗ್ರಾಮದೇವಿ ನೂತನ ದೇವಸ್ಥಾನ ಉದ್ಘಾಟನೆಗೊಳ್ಳಲಿದೆ. ಸಾಂಸ್ಕ್ರತಿಕ, ಆಧ್ಯಾತ್ಮಿಕ ಕಾರ್ಯಕ್ರಮ, ಅನ್ನ ಪ್ರಸಾದ, ಡೊಳ್ಳಿನ ಗಾಯನ, ಗೀಗೀ ಪದಗಳು, ಭಜನೆ, ಕೊನೆಯ ದಿನ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಾತ್ರಾ ಕಮಿಟಿ ಮುಖ್ಯಸ್ಥ ಸಣ್ಣಸಂಗಪ್ಪ ಕಬ್ಬೂರ, ಕಮಿಟಿಯ ಪತ್ರೆಪ್ಪ ಅಂಗಡಿ, ಬಸಪ್ಪ ರಾಮನಗೌಡರ, ಅಡಿವೆಪ್ಪ ಕರಡಿ, ಗದಿಗೆಪ್ಪ ಭಿಮನಗೌಡರ, ಸಂಗಪ್ಪ ತಳವಾರ, ಗಂಗಪ್ಪ ವಕ್ಕುಂದ, ಗೊಳಪ್ಪ ಕಬ್ಬೂರು, ನಿಂಗಪ್ಪ ಬಾಳೇಕುಂದರಗಿ ಜಾತ್ರೆ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.