

ನವಲಗುಂದ: ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಬುಧವಾರ ಗ್ರಾಮದೇವತೆಯರಾದ ದ್ಯಾಮವ್ವ ಹಾಗೂ ದುರ್ಗವ್ವ ದೇವಿಯರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಪರಸ್ಪರ ಭಂಡಾರ ಎರಚುವ ಮೂಲಕ ಗ್ರಾಮಸ್ಥರು ಹೊನ್ನಾಟವಾಡಿದರು.</p><p>ಗ್ರಾಮ ದೇವಿಯರ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಡೊಳ್ಳು ಕುಣಿತ, ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಗೆ ಮೆರುಗು ತಂದರು. ದೇವಿಗೆ ಉಘೇ...ಉಘೇ... ಎಂದು ಘೊಷಣೆ ಕೂಗುತ್ತ ಗ್ರಾಮಸ್ಥರು ಹೊನ್ನಾಟದಲ್ಲಿ ಪಾಲ್ಗೊಂಡರು. ನಂತರ ದೇವಸ್ಥಾನದಲ್ಲಿ ಹೋಮ, ಹವನ, ವಿವಿಧ ಧಾರ್ವಿುಕ ಕಾರ್ಯಗಳು ನಡೆದವು. ಫೆ. 7ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಪ್ರತಿ ದಿನ ಸಂಜೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ಫೆ. 7ರಂದು ಸಂಜೆ ದೇವತೆಯರನ್ನು ಸೀಮೆಗೆ ಕಳುಹಿಸುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ. ಡಾ. ಶ್ರೀ ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮೀಜಿಗಳು, ಶಿವಾನಂದ ಗುಡಸಲಮನಿ, ಬಸವರಾಜ ಉಳ್ಳಾಗಡ್ಡಿ, ಭೀಮಣ್ಣ ಪಟ್ಟೇದ, ದ್ಯಾಮನಗೌಡ್ರ ಅಯ್ಯನಗೌಡ್ರ, ಎಂ.ಎಲ್. ಸಂಗನಗೌಡ್ರ, ಬಸವರಾಜ ಗುಡಿಸಲಮನಿ, ನಿಜಗುಣಿ ಗಾಡದ, ದ್ಯಾಮಣ್ಣ ಬಾಗೂರ, ಚಳ್ಳಪ್ಪ ಬರ್ದವಾಡ, ಶಂಭುಲಿಂಗ ರೇವಣಪ್ಪನವರ, ಉಮೇಶ ಹಡಪದ,
ಭೀಮಪ್ಪ ಪೂಜಾರ, ಟೇಕನಗೌಡ ಕುಲಕರ್ಣಿ, ಕಲ್ಲನಗೌಡ ಕುಲಕರ್ಣಿ, ಇತರರಿದ್ದರು.