ಚೌಳೂರಲ್ಲಿ ವಿಜೃಂಭಣೆಯ ತೆಪ್ಪೋತ್ಸವ

dj p pura teppotsava
Published on

ಪರಶುರಾಮಪುರ: ಸಮೀಪದ ಚೌಳೂರು ಗ್ರಾಮದ ಹೊರವಲಯದ ವೇದಾವತಿ ನದಿಯಲ್ಲಿ ಶುಕ್ರವಾರ ಸೂರ್ಯಸ್ತದ ವೇಳೆ ಗ್ರಾಮ ದೇವರಾದ ವೀರಭದ್ರಸ್ವಾಮಿ ಹಾಗೂ ಆಂಜನೇಯಸ್ವಾಮಿ ದೇವರ ತೆಪ್ಪೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ತಿಕೋತ್ಸವದ ಹಿನ್ನೆಲೆ ಗ್ರಾಮದ ಭಕ್ತರು ಬೇರೆಡೆಯಿಂದ ತಂದ ತೆಪ್ಪವನ್ನು ವಿವಿಧ ಹೂವು ವಸ್ತ್ರಗಳಿಂದ ಅಲಂಕರಿಸಿದರು. ವೀರಭದ್ರಸ್ವಾಮಿ ಹಾಗೂ ಆಂಜನೇಯಸ್ವಾಮಿ ದೇಗುಲಗಳಲ್ಲಿನ ಉತ್ಸವ ಮೂರ್ತಿಗಳನ್ನು ವಿವಿಧ ಜನಪದ ವಾದ್ಯಗಳ ಮೂಲಕ ವೇದಾವತಿ ನದಿ ದಂಡೆಗೆ ಕರೆತಂದು ತೆಪ್ಪದಲ್ಲಿ ಮೂರ್ತಿಗಳನ್ನು ಪ್ರತಿಷ್ಟಾಪಿಸಲಾಯಿತು.

ಸುತ್ತಲೂ ಗ್ರಾಮಗಳಿಂದ ತೆಪ್ಪೋತ್ಸವಕ್ಕೆ ಆಗಮಿಸಿದ್ದ ಜನರು ಶಿಳ್ಳೆ ಹೊಡೆದು ಜೈಕಾರ ಕೂಗಿದರು. ತೆಪ್ಪಕ್ಕೆ ಹೂವು, ಹೊಂಬಾಳೆ ಎಸೆದು ಹರಕೆ ಸಲ್ಲಿಸಿದರು. ತೆಪ್ಪದಲ್ಲಿ ದೇವರ ಮೂರ್ತಿಗಳ ಬಳಿ ಪೂಜಾರರು ಇದ್ದು ಮೂರ್ನಾಲ್ಕು ಸುತ್ತು ಬ್ಯಾರೇಜ್​ನಲ್ಲಿ ಸುತ್ತಿಸಿ ನಂತರ ದಡಕ್ಕೆ ತರಲಾಯಿತು.

ಗ್ರಾಮದಲ್ಲಿ ಶುಕ್ರವಾರ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯವರು, ಗ್ರಾಪಂ ಸದಸ್ಯರು, ವಿವಿಧ ಸಮುದಾಯಗಳ ಮುಖಂಡರು, ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net