ಗ್ರಾಪಂ ಅಭಿವೃದ್ಧಿ ಕುಂಠಿತ, ಸದಸ್ಯರಿಂದ ಗ್ರಾಮಸಭೆ ಬಹಿಷ್ಕಾರ

29ald-1 (1)
Published on

ಆಲ್ದೂರು: ಒಂದು ವರ್ಷದಿಂದ ಕೆಳಗೂರು ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ ಇದೇ ರೀತಿ ಮುಂದುವರಿದರೆ ನಾವು ಮಂದಿನ ಗ್ರಾಮ ಸಭೆಗೂ ಗೈರಾಗುತ್ತವೆ ಎಂದು ಕೆಳಗೂರು ಗ್ರಾಪಂ ಸದಸ್ಯರು ಗ್ರಾಮಸಭೆಯನ್ನು ಬಹಿಷ್ಕರಿಸಿದರು.
11 ಸದಸ್ಯ ಬಲದ ಗ್ರಾಪಂ ಕಚೇರಿಯಲ್ಲಿ ಅ.30ರಂದು ಗ್ರಾಮಸಭೆ ಆಯೋಜಿಸಲಾಗಿತ್ತು. ಗ್ರಾಮಸಭೆಗೆ 9 ಸದಸ್ಯರು ಹಾಜರಾಗಿ ಐವರು ಸದಸ್ಯರು ಗೈರಾಗಿದ್ದರು. ಪಂಚಾಯತಿಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಕಾರ್ಯನಿರ್ವಹಿಸಲಿದ್ದರೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ದಿವ್ಯ ಪ್ರಸಾದ್ ಮಾತನಾಡಿ, ಪಿಡಿಒ ದೇವ್‌ರಾಜ್ ಅವರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ .ಸದಸ್ಯರು ಹೇಳಿದ ಕೆಲಸ ಮಾಡುತ್ತಿಲ್ಲ,ಪಂಚಾಯತಿ ಹೊರ ಭಾಗದ ಸಾರ್ವಜನಿಕರು ಹೇಳಿದ ಕೆಲಸ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಳಗೂರು ಭಾಗದಲ್ಲಿ ನೀರು ಘಂಟಿಯನ್ನು ವರ್ಗಾವಣೆ ಮಾಡಿ 2 ತಿಂಗಳು ಕಳೆದರೂ ನೇಮಕ ಮಾಡಿಲ್ಲ ,ರೈಸಿಂಗ್ ಪೈಪ್‌ನಲ್ಲಿ ನೀರು ಸಂಪರ್ಕ ಕೊಡಲು ಅನುಮತಿ ಇಲ್ಲದಿದ್ದರೂ ನೀರಿನ ಸಂಪರ್ಕ ಕೊಡಲಾಗಿದೆ ಎಂದು ಬೇಸರ ವ್ಯಕ್ತಪಡಿಸದರು. ನರೇಗಾ ಕಾಮಗಾರಿಗೆ ಎಂಎನ್‌ಆರ್ ಹಾಕುತ್ತಿಲ್ಲ ಪಂಚಾಯತಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಆರೋಪಿಸಿದರು.
ಸದಸ್ಯರಾದ ಸ್ವರೂಪ್, ಮಂಜಯ್ಯ , ಮಾಣಿಮಕ್ಕಿ ಮಂಜಯ್ಯ, ಜಿನ್ನಪ್ಪ ಹೊಸಪೇಟೆ, ಮಾಜಿ ಅಧ್ಯಕ್ಷ ರುದ್ರೇಶ್ ಸಭೆಯನ್ನು ಬಹಿಷ್ಕರಿಸಿದರು ಇಂದಿನ ಸಭೆಯನ್ನು ಮುಂದೂಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net