ರೈಲು ನಿಲುಗಡೆಗೆ ಒತ್ತಾಯಿಸಿ ಮನವಿ

2GKK1
Published on

ಗೋಕಾಕ: ಗೋಕಾಕ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಬೆಳಗಾವಿ-ಮಿರಜ್ ನಡುವೆ ಸಂಚರಿಸುವ ಎಲ್ಲ ರೈಲುಗಳು ಗೋಕಾಕ ರೈಲು ನಿಲ್ದಾಣ (ಕೊಣ್ಣೂರ) ದಲ್ಲಿ ನಿಲಗಡೆ ಮಾಡುವಂತೆ ಆಗ್ರಹಿಸಿ ಸಂಸದ ಜಗದೀಶ ಶೆಟ್ಟರ್ ಅವರಿಗೆ ಸ್ಥಳೀಯ ನಾಗರಿಕರು ಬುಧವಾರ ಮನವಿ ಸಲ್ಲಿಸಿದರು.

ಈ ಬಗ್ಗೆ ಶಾಸಕ ರಮೇಶ ಜಾರಕಿಹೊಳಿ ಅವರು ಸಹ ಶಿಾರಸು ಪತ್ರವನ್ನು ನೀಡಿದ್ದು ಜಾತ್ರೆಗೆ ಬರುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಎಲ್ಲ ಎಕ್ಸಪ್ರೆಸ್ ರೈಲುಗಳನ್ನು ಜೂನ್ 15ರಿಂದ ಜುಲೈ15ರ ವರೆಗೆ ನಿಲುಗಡೆ ಮಾಡಬೇಕು ಎಂದು ವಿನಂತಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಜಗದೀಶ ಶೆಟ್ಟರ್ ಕೇಂದ್ರ ರೈಲ್ವೆ ಸಚಿವರಿಗೆ ಎಕ್ಸಪ್ರೆಸ್ ರೈಲು ನಿಲುಗಡೆ ಮಾಡಲು ಕೋರುವುದಾಗಿ ತಿಳಿಸಿದ್ದಾರೆ.ಎಸ್‌ಆರ್‌ಕೆಎಸ್ ಶಾಲೆಯ ಸಂಸ್ಥಾಪಕ ಪಾಂಡು ಕದಮ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಪತ್ರಕರ್ತ ವಸಂತ ಹವಾಲ್ದಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net