ಗ್ರಾಪಂನಿಂದ ಕೆ.ಪಾತೂರು ಶಾಲಾವರಣ ಸ್ವಚ್ಛತೆ

PATHUR SCHOOL
Published on

ಶ್ರೀನಿವಾಸಪುರ: ತಾಲೂಕಿನ ಕೆ.ಪಾತೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಸೋಮವಾರ ಗ್ರಾಪಂನಿಂದ ಜೆಸಿಬಿ ಮೂಲಕ ಸ್ವಚ್ಛ ಮಾಡಲಾಯಿತು.

ಶಾಲಾ ಆವರಣದಲ್ಲಿ ಗಿಡ-ಗಂಟಿ ಬೆಳೆದು ವಿಷಪೂರಿತ ಜೀವಿಗಳು ವಾಸಸ್ಥಾನವಾಗಿ ಮಾರ್ಪಟ್ಟು ಜೀವಭಯದಲ್ಲೇ ವಿದ್ಯಾರ್ಥಿಗಳು ಕಾಲ ಕಳೆಯುವಂತಾಗಿತ್ತು. ಈ ಕುರಿತು ವಿಜಯವಾಣಿಯಲ್ಲಿ ಜ.5ರಂದು ಮೂಲ ಸೌಕರ್ಯ ಕಾಣದ ಕೆ.ಪಾತೂರು ಸರ್ಕಾರಿ ಶಾಲೆ' ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು.

ವರದಿಯಿಂದ ಎಚ್ಚೆತ್ತ ಗ್ರಾಮಪಂಚಾಯಿತಿ ಅಧ್ಯಕ್ಷೆ ಮತ್ತು ಪಿಡಿಒ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಜೆಸಿಬಿ ಮೂಲಕ ಸ್ವಚ್ಛ ಮಾಡಿಸಿದರು.

ಪಿಡಿಒ ಏಜಾಜ್​ಪಾಷಾ ಮಾತನಾಡಿ, ಸಮಸ್ಯೆಯು ಬಗ್ಗೆ ಗಮನಕ್ಕೆ ಬಂದಿಲ್ಲ. ಪ್ರತಿಕೆಯಲ್ಲಿ ಪ್ರಕಟವಾದ ಮೇಲೆ ಸ್ಥಳಕ್ಕೆ ಭೇಟಿ ನೀಡಿ, ಜೆಸಿಬಿ ಮೂಲಕ ಶಾಲಾವರಣವನ್ನ ಸ್ವಚ್ಛ ಮಾಡಲಾಯಿತು ಎಂದು ತಿಳಿಸಿದರು.

ಗ್ರಾಪಂ ಸದಸ್ಯ ಬಾಬು ಪ್ರಕಾಶ್​ ಮಾತನಾಡಿ, ಶಾಲಾವರಣದಲ್ಲಿನ ಗಿಡ&ಗಂಟಿಗಳನ್ನ ಗ್ರಾಮಪಂಚಾಯಿತಿಯಿಂದ ಸ್ವಚ್ಛತೆ ಹಮ್ಮಿಕೊಳ್ಳಲಾಗಿದ್ದು, ಗ್ರಾಮದಲ್ಲಿ 5 ವಿದ್ಯುತ್​ ಕಂಬಗಳು ಶಿಥಿಲಾವಸ್ಥೆಯಲ್ಲಿ ಇದ್ದು, ಅವುಗಳನ್ನು ಶೀಘ್ರದಲ್ಲೇ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಬದಲಾಯಸಿಕೊಡುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net