ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಲೀಡ್

4BK2
ಬಸವಕಲ್ಯಾಣದಲ್ಲಿ ಬಿಜೆಪಿ ಶನಿವಾರ ಸಂಜೆ ಆಯೋಜಿಸಿದ್ದ ಗ್ರಾಮ ಚಲೋ ಅಭಿಯಾನ ಕಾರ್ಯಾಗಾರವನ್ನು ಶಾಸಕ ಶರಣು ಸಲಗರ ಉದ್ಘಾಟಿಸಿದರು. ಪ್ರಮುಖರಾದ ಅಶೋಕ ವಕಾರೆ, ಅರವಿಂದ ಮುತ್ತೆ, ಸುಧೀರ ಕಾಡಾದಿ, ದೀಪಕ ಗಾಯಕವಾಡ, ಶೋಭಾ ತೆಲಂಗ, ಶಂಖರ ನಾಗದೆ, ಸಿದ್ದು ಬಿರಾದಾರ ಇತರರಿದ್ದರು.
Published on

ಬಸವಕಲ್ಯಾಣ: ಭಾರತವನ್ನು ವಿಶ್ವಗುರುವನ್ನಾಗಿಸುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿರುವ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಅಗುವ ಅಗತ್ಯವಿದ್ದು, ಬೀದರ್ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಯಾರಿಗೆ ಟಿಕೆಟ್ ಕೊಟ್ಟರೂ ಬಹುಮತದಿಂದ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಶಾಸಕ ಶರಣು ಸಲಗರ ಹೇಳಿದರು.

ನಗರದ ವರ್ಷಾ ಪಂಕ್ಷನ್ ಹಾಲ್‌ನಲ್ಲಿ ಬಿಜೆಪಿ ಶನಿವಾರ ಸಂಜೆ ಆಯೋಜಿಸಿದ್ದ ಗ್ರಾಮ ಚಲೋ ಅಭಿಯಾನದ ಕಾರ್ಯಾಗಾರ ಉದ್ಘಾಟಿಸಿದ ಅವರು, ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮುಖಂಡರು, ಕಾರ್ಯಕರ್ತರು ಮನೆ-ಮನೆಗೆ ತೆರಳಿ ಮೋದಿ ನೇತೃತ್ವದಲ್ಲಿ ಆಗಿರುವ ಸಾಧನೆಯನ್ನು ತಿಳಿಸಿ ಕ್ಷೇತ್ರದಲ್ಲಿ ಹೆಚ್ಚಿನ ಲೀಡ್‌ನೊಂದಿಗೆ ಗೆಲ್ಲಿಸಲು ಶ್ರಮಿಸೋಣ ಎಂದರು.

ಅಯೋಧ್ಯೆ ಶ್ರೀ ರಾಮಮಂದಿರದಲ್ಲಿ ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮೂಲಕ ಭಾರತೀಯರ ೫೦೦ ವರ್ಷದ ಕನಸು ಸಾಕಾರಗೊಂಡಿದೆ. ವಿಶ್ವದಲ್ಲಿ ಭಾರತ ಮತ್ತೊಮ್ಮೆ ವಿಶ್ವಗುರುವಾಗಬೇಕು ಎಂಬ ದೂರದೃಷ್ಟಿಯೊಂದಿಗೆ ಮೋದಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದೇ ನಮ್ಮೆಲ್ಲರ ಗುರಿಯಾಗಬೇಕು ಎಂದು ಹೇಳಿದರು.

ಮುಖಂಡ ಜಗನ್ನಾಥ ಪಾಟೀಲ್, ಜಿಪಂ ಮಾಜಿ ಸದಸ್ಯ ಸುಧೀರ ಕಾಡಾದಿ, ಕಾರ್ಯಕಾರಿಣಿ ಸದಸ್ಯ ದೀಪಕ ಗಾಯಕವಾಡ, ಶಂಕರ ನಾಗದೆ, ಸಿದ್ದು ಬಿರಾದಾರ ಮಾತನಾಡಿದರು.

ಗ್ಯಾನೇಶ್ವರ ಪಾಟೀಲ್, ಶೋಭಾ ತೇಲಂಗ, ಉಲ್ಕಾವತಿ ಬಿರಾದಾರ, ವಿಶ್ವನಾಥ ಪಾಟೀಲ್, ಶಿವರಾಜ ತಾಟೆ, ಕಮಲಾಕರ ಪಾಟೀಲ್ ಇತರರಿದ್ದರು. ನಗರ ಘಟಕ ಅಧ್ಯಕ್ಷ ಅರವಿಂದ ಮುತ್ತೆ ಸ್ವಾಗತಿಸಿದರು. ಗ್ರಾಮೀಣ ಘಟಕ ಅಧ್ಯಕ್ಷ ಅಶೋಕ ವಕಾರೆ ಪ್ರಾಸ್ತಾವಿಕ ಮಾತನಾಡಿದರು. ಸುನೀಲ್ ರಾಠೋಡ್ ವಂದಿಸಿದರು. ಮಹಾಂತಯ್ಯ ಸ್ವಾಮಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net