

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಸೋಮವಾರ 3 ದಿನ ಪೂರೈಸಿತು.
ಮೂಲ ಮತ್ತು ಸೇವಾ ಸೌಲಭ್ಯ, ಪೀಠೋಪರಣ, ಅಪಾಯ ಭತ್ಯೆ, ಬಡ್ತಿ ಒದಗಿಸುವುದು ಹಾಗೂ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಗ್ರಾಮ ಆಡಳಿತಾಽಕಾರಿ ಹುದ್ದೆ ತಾಂತ್ರಿಕ ಹುದ್ದೆ ಅಲ್ಲದಿದ್ದರೂ ಮೊಬೈಲ್ ತಂತ್ರಾAಶ ಆಧಾರಿತ 21 ಸೇವೆಗಳನ್ನು ಕಲ್ಪಿಸಲು ಒತ್ತಡ ಹೇರಲಾಗುತ್ತಿದೆ. ತಾಂತ್ರಿಕ ಕೆಲಸದ ಒತ್ತಡ ಕಡಿಮೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜಿಲ್ಲಾ ಗೌರವ ಅಧ್ಯಕ್ಷ ಶಿರಿಲ್ ಗುತ್ತಲ, ಮಂಜುನಾಥ ಬಾಗೋಡಿ, ವೀರಣ್ಣ ರಂಗಪ್ಪನವರ, ವೆಂಕಟೇಶ ಹತ್ತಿಯವರ, ಮುತ್ತು ಚಿಕ್ಕನರಗುಂದ, ಯೋಗೇಂದ್ರಕುಮಾರ ಮುದಕಣ್ಣವರ, ನಿಂಗಪ್ಪ ಮುದ್ದಾಪುರ, ಸುವರ್ಣಾ ಚೀಟಿನ್, ಅಶ್ವಿನಿ ಬಿಡ್ನಾಳ, ನೀಲಮ್ಮ ದಾಸನಕೊಪ್ಪ, ಅಶ್ವಿನಿ ಪೂಜಾರ, ಇತರರು ಪಾಲ್ಗೊಂಡಿದ್ದರು.