ವಿಎಗಳಿಗೆ ಮೂಲ ಸೌಕರ್ಯ ಕಲ್ಪಿಸಿ

village administration officers protest koppal
Published on

ಕೊಪ್ಪಳ: ಮೂಲ ಸೌಕರ್ಯ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಕೇಂದ್ರ ಸಂದ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ನಗರದ ಡಿಸಿ ಕಚೇರಿ ಮುಂಭಾಗದಲ್ಲಿ ಮುಷ್ಕರ ಆರಂಭಿಸಿದರು.

ಗ್ರಾಮ ಮಟ್ಟದಲ್ಲಿ ಕಂದಾಯ ಇಲಾಖೆ ಕೆಸಲಗನ್ನು ನಿರ್ವಹಿಸುವ ನಮಗೆ ಸೂಕ್ತ ಸೌಲಭ್ಯಗಳಿಲ್ಲ. ಉತ್ತಮ ಕಚೇರಿ, ಟೇಬಲ್​, ದಾಖಲೆ ಸಂಗ್ರಹಕ್ಕೆ ಅಲ್ಮೇರಾಗಳಿಲ್ಲ. ವಿವಿಧ 21 ಸೇವೆಗಳನ್ನು ಮೊಬೈಲ್​ ತಂತ್ರಾಂಶ ಮೂಲಕ ನಿರ್ವಹಿಸಬೇಕಿದ್ದು, ಅದಕ್ಕೆ ತಕ್ಕಂತೆ ಮೊಬೈಲ್​ ವಿತರಿಸಿಲ್ಲ. ಕೆಸಿಎಸ್​ಆರ್​ ನಿಯಮದಂತೆ ಸಾರ್ವತ್ರಿಕ ರಜೆ ಸಿಗುತ್ತಿಲ್ಲ. ರಜೆಯಂದೇ ಮೇಲಧಿಕಾರಿಗಳು ಕೆಲಸ ನಿರ್ವಹಿಸಲು ಮೆಮೊ ನೀಡುತ್ತಾರೆ. ಸಕಾಲಕ್ಕೆ ಮದೊನ್ನತಿ, ವರ್ಗಾವಣೆ, ಪತಿ&ಪತ್ನಿ ಪ್ರಕರಣಗಳಲ್ಲಿ ಕೌನ್ಸಲಿಂಗ್​ ಮೂಲಕ ವರ್ಗಾವಣೆ ವಿಳಂಬವಾಗುತ್ತಿದೆ. ಅನಗತ್ಯ ಕಾರಣ ನೀಡಿ ಅಮಾನತು ಮಾಡಲಾಗುತ್ತಿದೆ. ಆಹಾರ ಇಲಾಖೆ ಕೆಲಸವನ್ನು ನಾವೇ ನಿರ್ವಹಿಸುತ್ತಿದ್ದೇವೆ. ಆದರೆ, ಕೆಲಸಕ್ಕೆ ತಕ್ಕಂತೆ ವೇತನ, ಸೌಲಭ್ಯಗಳಿಲ್ಲವೆಂದು ಅಳಲು ತೋಡಿಕೊಂಡರು.

ಉತ್ತಮ ಕಚೇರಿ, ಮೊಬೈಲ್​ ಸೇರಿ ಮೂಲ ಸೌಕರ್ಯ ಕಲ್ಪಿಸಿ. ವೇತನ ಪರಿಷ್ಕರಣೆ, ವರ್ಗಾವಣೆ ಮಾಡಿ. ಅನಗತ್ಯ ಅಮಾನತು ಹಿಂಪಡೆಯಬೇಕು. ಅಂತರ್​ ಜಿಲ್ಲಾ ಪತಿ&ಪತ್ನಿ ಪ್ರಕರಣಗಳ ವರ್ಗಾವಣೆಗೆ ಚಾಲನೆ ನೀಡಬೇಕು. ಅರ್ಹರಿಗೆ ಪದನ್ನೋತಿ ನೀಡಿ. ಆಪತ್ತು ಭತ್ಯೆ ಸೇವೆ ಜಾರಿ ಮಾಡಬೇಕು. ಪ್ರಯಾಣ ಭತ್ಯೆ ಹೆಚ್ಚಿಸಿ. ತಹಸೀಲ್​, ಎಸಿ, ಡಿಸಿ ಕಚೇರಿಗಳಲ್ಲಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿರುವ ಗ್ರಾಮ ಆಡಳಿತಾಧಿಕಾರಿಗಳನ್ನು ಬಿಡುಗಡೆಗೊಳಿಸಿ ಮೂಲ ಸ್ಥಳಕ್ಕೆ ಕಳಿಸುವಂತೆ ಒತ್ತಾಯಿಸಿದರು.

ಸಂದ ಜಿಲ್ಲಾಧ್ಯಕ್ಷ ಮಹ್ಮದ ಆಸೀಪ್​ ಅಲಿ, ಉಪಾಧ್ಯಕ್ಷ ಬಸವರಾಜ ಲಂಬಾಣಿ, ತಾಲೂಕು ಅಧ್ಯಕ್ಷ ಗಂಗಾಧರ ಹಳ್ಳಿ, ಕಂದಾಯ ಇಲಾಖೆ ನೌಕರರ ಸಂದ ಜಿಲ್ಲಾಧ್ಯಕ್ಷ ಮಂಜುನಾಥ ಮ್ಯಾಗಳಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net