

ವಿಜಯವಾಣಿ ಸುದ್ದಿಜಾಲ ಧಾರವಾಡ
ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಗ್ರಾಮ ಲೆಕ್ಕಾಧಿಕಾರಿಗೆ (ಈಗಿನ ಗ್ರಾಮ ಆಡಳಿತಾಽಕಾರಿ) 4 ವರ್ಷ ಜೈಲುಶಿಕ್ಷೆ ಹಾಗೂ 20,000 ರೂಪಾಯಿ ದಂಡ ವಿಧಿಸಿ 3ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ. ಕಲಘಟಗಿ ತಾಲೂಕಿನ ಬಗಡಗೇರಿ ಗ್ರಾಮ ಲೆಕ್ಕಾಽಕಾರಿ ಮೋಹನ ಛಾಯಪ್ಪ ಲಮಾಣಿ ಜೈಲು ಶಿಕ್ಷೆಗೆ ಗುರಿಯಾದವರು.
* ಪ್ರಕರಣದ ಹಿನ್ನೆಲೆ: 2018ರ ಆಗಸ್ಟ್ನಲ್ಲಿ ಬಗಡಗೇರಿ ಗ್ರಾಮದ ನಬಿಸಾಬ ದೊಡಮನಿ ಎಂಬಾತ ವಾರಸಾ ಪ್ರಮಾಣಪತ್ರ ಪಡೆಯಲು ಗ್ರಾಮ ಲೆಕ್ಕಾಽಕಾರಿ ಮೋಹನ ಲಮಾಣಿ ಬಳಿ ಹೋಗಿದ್ದರು. ಪ್ರಮಾಣಪತ್ರದಲ್ಲಿ ಸಂಬ0ಧಿಕರ ಹೆಸರು ಸೇರ್ಪಡೆ ವಿಚಾರವಾಗಿ ಮೋಹನ, 15,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಕೊಡಲು ಒಪ್ಪದ ನಬಿಸಾಬ ಲೋಕಾಯುಕ್ತ ಮೊರೆ ಹೋಗಿದ್ದರು. ಆತನಿಂದ ಲಂಚ ಪಡೆಯುತ್ತಿದ್ದ ಮೋಹನ ಹಣದ ಸಮೇತ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಈ ಕುರಿತು ಧಾರವಾಡ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಅಽಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮೋಹನ ದೋಷಿ ಎಂದು ತೀರ್ಪು ನೀಡಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಸರ್ಕಾರದ ಪರ ಅಭಿಯೋಜಕ ಎಸ್.ಎಸ್. ಶಿವಳ್ಳಿ ವಾದ ಮಂಡಿಸಿದ್ದರು.