ಗ್ರಾಮಾಡಳಿತಾಧಿಕಾರಿಗಳ ಧರಣಿ

Btw_protest
Published on

ಬಂಟ್ವಾಳ: ಬೇಡಿಕೆಗಳು ಈಡೇರದ ಹೆನ್ನೆಲೆಯಲ್ಲಿ ಕರ್ನಾಟಕ ಗ್ರಾಮ ಆಡಳಿತ ಅಧಿಕಾರಿಗಳ ವಂದದ ವತಿಯಿಂದ ಮತ್ತೆ ಮುಷ್ಕರ ಆರಂಭವಾಗಿದ್ದು, ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದ ಮುಂಭಾಗ ಧರಣಿ ನಡೆಸಿದರು.

ರಾಜ್ಯವ್ಯಾಪಿ ಮುಷ್ಕರದ ಕರೆಯಂತೆ ಬಂಟ್ವಾಳಲ್ಲೂ ತಾಲೂಕು ಗ್ರಾಮಾಡಳಿತಾಧಿಕಾರಿಗಳ ಸಂದ ಅಧ್ಯಕ್ಷ ಅನಿಲ್ ಕೆ.ಪೂಜಾರಿ ಸಹಿತ ಸಂದ ಸದಸ್ಯರು ಮುಷ್ಕರ ಕುಳಿತರು. ಕಳೆದ ವರ್ಷ ಮುಷ್ಕರ ನಡೆಸಿದ ಸಂದರ್ಭ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಯಾವುದೇ ತೃಪ್ತಿಕರ ಕ್ರಮಗಳನ್ನು ಅನುಸರಿಸಿಲ್ಲ. ಈ ಹಿನ್ನೆಲೆ ಮತ್ತೆ ರಾಜ್ಯವ್ಯಾಪಿ ಮುಷ್ಕರವನ್ನು ಅನಿರ್ದಿಷ್ಟಾವಧಿಗೆ ಆರಂಭಿಸಲಾಗಿದೆ. ಬಂಟ್ವಾಳ ತಾಲೂಕು ಗ್ರಾವಾಡಳಿತಾಧಿಕಾರಿಗಳ ಸಂದ ಗೌರವಾಧ್ಯಕ್ಷ ಎಂ.ಪ್ರವೀಣ್ ಕುವಾರ್, ಉಪಾಧ್ಯಕ್ಷ ಕರಿಬಸಪ್ಪ ನಾಯ್ಕ, ಖಜಾಂಚಿ ವೈಶಾಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net