

ಶಿವಮೊಗ್ಗ: ನಗರ ಹೊರವಲಯದ ಕಸಬಾ-1ರಲ್ಲಿ ಪೌತಿ ಖಾತೆ ಬದಲಾವಣೆಗೆ 25 ಸಾವಿರ ರೂ.ಗೆ ಲಂಚ ಪಡೆದ ಗ್ರಾಮ ಲೆಕ್ಕಾಧಿಕಾರಿಯು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕಸಬಾ-1ರ ಗ್ರಾಮ ಲೆಕ್ಕಾಧಿಕಾರಿ ಸಂಜಯ್ ಮೋಹಿತೆ ಬಂಧಿತ. ಶಿವಮೊಗ್ಗ ತಾಲೂಕು ಅಗಸವಳ್ಳಿಯ ಮುನಿರಂಗೇಗೌಡ ಎಂಬುವರು ಸಂಜಯ್ ಮೋಹಿತೆ ಮೇಲೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಪೌತಿ ಖಾತೆ ಬದಲಾವಣೆ ಮಾಡಿಕೊಡುವ ಸಂಬಂಧ ಲಂಚದ ಹಣ ಪಡೆದು ಬೈಕ್‌ನಲ್ಲಿ ಹೊರಟಿದ್ದಾಗ ಕಚೇರಿ ಎದುರೇ ಬಂಧಿಸಿದ್ದಾರೆ. ಇನ್‌ಸ್ಪೆಕ್ಟರ್ ವೀರಭದ್ರಪ್ಪ ಕುಸಲಾಪುರ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.