ವಿಕ್ರಾಂತ್ ರೋಣ: ಅಭಿಮಾನಿಗಳಿಂದ ಬೃಹತ್ ರ‍್ಯಾಲಿ

ada57655-7b42-4e10-83d5-711fbb90a304
Published on

ಚಾಮರಾಜನಗರ: ಗುರುವಾರ ಬಿಡಗಡೆಯಾಗಲಿರುವ ಕಿಚ್ಚಸುದೀಪ್ ಅಭಿನಯದ ವಿಕ್ರಾಂತ್‌ರೋಣ ಚಿತ್ರವು ಶತದಿನೋತ್ಸವ ಆಚರಿಸಲೆಂದು ನಗರದಲ್ಲಿ ಜಿಲ್ಲಾ ಆಲ್ ಇಂಡಿಯಾ ಬಾದ್‌ಷಾಕಿಚ್ಚ ಸುದೀಪ್ ಫ್ಯಾನ್ಸ್ ಆಸೋಸೀಯೇಷನ್ ನೇತೃತ್ವದಲ್ಲಿ ಅಭಿಮಾನಿಗಳು ನಗರದಲ್ಲಿ ಜಾನಪದ ಕಲಾತಂಡಗಳೊAದಿಗೆ ಬೃಹತ್ ರ‍್ಯಾಲಿ ನಡೆಸಿದರು.


ಅಸೋಸೀಯೇಷನ್  ಅಧ್ಯಕ್ಷ ನಾಗೇಂದ್ರನಾಯಕ ಅವರ ನೇತೃತ್ವದಲ್ಲಿ ನಗರದ ಪ್ರವಾಸಿಮಂದಿರ ಆವರಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ    ಸಮಾವೇಶಗೊಂಡ ಅಭಿಮಾನಿಗಳು,  ಆಟೋದಲ್ಲಿ ಕಿಚ್ಚಸುದೀಪ್ ಭಾವಚಿತ್ರವಿಟ್ಟು, ಸುದೀಫ್ ಭಾವಚಿತ್ರಯುಳ್ಳ ಭಾವುಟ ಹಿಡಿದು ಸತ್ತಿರಸ್ತೆ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಭುವನೇಶ್ವರಿ ವೃತ್ತ, ಬಿ. ರಾಚಯ್ಯ ಜೋಡಿರಸ್ತೆಯ ಮೂಲಕ ಬಸವೇಶ್ವರ ಚಿತ್ರಮಂದಿರದವರಗೆ ರ‍್ಯಾಲಿ ನಡೆಸಿದರು. ಚಿತ್ರಮಂದಿರ ಮುಂದೆ ಉದ್ದನೆಯ ಪಟಾಕಿ ಸಿಡಿಸಿ, ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ಶತದಿನೋತ್ಸವ ಆಚರಿಸಲೆಂದು ಜೈಕಾರ ಕೂಗಿ ಸಂಭ್ರಮಿಸಿದರು. 

ರ‍್ಯಾಲಿಯಲ್ಲಿ ಜಿಲ್ಲಾ ಆಲ್ ಇಂಡಿಯಾ ಬಾದ್‌ಷಾಕಿಚ್ಚ ಸುದೀಪ್ ಫ್ಯಾನ್ಸ್ ಆಸೋಸೀಯೇಷನ್ ಉಪಾಧ್ಯಕ್ಷ ಆನಂದ್, ರಾಮು, ಸಂತೋಷ್‌ನಾಯಕ, ರಂಗಸ್ವಾಮಿ, ಬಸು ಮದಕರಿ, ತಿರುಪತಿ, ಚೇತನನಾಯಕ, ಚಂದು, ಚಂದ್ರು, ಸತೀಶ್, ಶೇಖರ್, ಹಾಗೂ ತಾಲೂಕಿನ ಹರದನಹಳ್ಳಿ, ಹೊಮ್ಮ, ಬಸವಾಪುರ, ಅಮಚವಾಡಿ, ಯಾನಗಳ್ಳಿ, ತಮ್ಮಡಹಳ್ಳಿ, ನಾಗವಳ್ಳಿ, ಜ್ಯೋತಿಗೌಡನಪುರ, ರಾಮಸಮುದ್ರ, ಸಾಗಡೆ. ಕೆಂಗಾಕಿ, ಇತರೆ ಗ್ರಾಮಗಳಿಂದ ಅಭಿಮಾನಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net